ಜಿಲ್ಲೆ

ತರಬೇತಿ ಅವಧಿ ವಿಸ್ತರಣೆ


ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶಿಕ್ಪಕಿಯರ ಸರ್ಕಾರಿ ತರಬೇತಿ ಸಂಸ್ಥೆ (ಟಿಸಿಡಬ್ಲೂ) ಪ್ರಸ್ತುತ 2024-25ನೇ ಸಾಲಿನ ಶೈಣಿಕ ವರ್ಷಕ್ಕೆ ಕನ್ನಡ, ಉರ್ದು ಹಾಗೂ ಇಂಗ್ಲಿಷ ಮಾಧ್ಯಮದ ಡಿಪ್ಲೋಮಾ ಇನ್​ ಎಲೆಮೆಂಟರಿ ಎಜ್ಯುಕೇಷನ್​ (ಡಿಇಎಲ್​ಇಡಿ) ತರಬೇತಿ ಪ್ರವೇಶ ಅವಧಿಯನ್ನು ಜು. 31ರವರೆಗೆ ವಿಸ್ತರಿಸಿದೆ
ಹೆಣ್ಣು ಮಕ್ಕಳು ಮಾತ್ರ ಡಿಇಎಲ್​ಇಡಿ ತರಬೇತಿ ಪಡೆಯಲು ಅವಕಾಶವಿದ್ದು, ಕಲಾ, ವಿಜ್ಞಾನ ಅಥವಾ ವಾಣಿಜ್ಯ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು. ಸಾಮಾನ್ಯ ವರ್ಗದವರು ಶೇ.50 ಮತ್ತು ಎಸ್​ಸಿ, ಎಸ್​ಟಿ ಹಾಗೂ ಪ್ರವರ್ಗ-1ರ ವಿದ್ಯಾಥಿರ್ಗಳು ಶೇ. 45 ಅಂಕ ಪಡೆದಿರಬೇಕು. ಪದವೀಧರ ವಿದ್ಯಾಥಿರ್ನಿಯರೂ ಪ್ರವೇಶ ಪಡೆಯಬಹುದು.
ಈ ತರಬೇತಿಯಿಂದ ಸರ್ಕಾರಿ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಟಿಇಟಿ ಮತ್ತು ಸಿಇಟಿ ತರಬೇತಿ, ಕಂಪ್ಯೂಟರ್​ ತರಬೇತಿಗೆ ಉಚಿತ ಮಾರ್ಗದರ್ಶನ ಮಾಡಲಾಗುವುದು. ನುರಿತ ಸಿಬ್ಬಂದಿ ವರ್ಗದ ಜತೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆ ಸಂಪಕಿರ್ಸಬಹುದು ಎಂದು ತರಬೇತಿ ಸಂಸ್ಥೆ ಪ್ರಾಚಾರ್ಯ ಬಿ.ಎಂ. ಬಡಿಗೇರ ತಿಳಿಸಿದ್ದಾರೆ.