ಕಾರವಾರ: ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ರೈಲನ್ನು ಉತ್ತರ ಕನ್ನಡ ಜಿಲ್ಲೆಯ ಮುರ್ಡೆಶ್ವರದವರೆಗೆ ವಿಸ್ತರಿಸುವ ಸಂಬಂಧ ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆ ನಿಗಮಗಳ ನಡುವೆ ಪತ್ರ ವ್ಯವಹಾರ ನಡೆದಿದೆ. ಆದರೆ, ಈ ರೈಲನ್ನು ಕಾರವಾರದವರೆಗೆ ಅಥವಾ ಕನಿಷ್ಠ ಕುಮಟಾದವರೆಗಾದರೂ ವಿಸ್ತರಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.
ಚೆನ್ನೈನಿಂದ ಪ್ರತಿ ದಿನ ಸಂಜೆ 4.20ಕ್ಕೆ ಹೊರಡುವ ರೈಲು 12685 ಮರುದಿನ ಬೆಳಗ್ಗೆ 7.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ನಂತರ ಮಧ್ಯಾಹ್ನ 4.55ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡುವ ರೈಲು-12686 ಮರುದಿನ ಬೆಳಗ್ಗೆ 8.05ಕ್ಕೆ ಚೆನ್ನೈ ತಲುಪಲಿದೆ.
ಚೆನ್ನೈನಿಂದ ಬರುವ ರೈಲನ್ನು ಇಡೀ ದಿನ ಮಂಗಳೂರಿನಲ್ಲಿ ನಿಲ್ಲಿಸುವ ಬದಲು ಮುರ್ಡೆಶ್ವರದವರೆಗೆ ಓಡಿಸಬಹುದು ಎಂಬುದು ದಕ್ಷಿಣ ರೈಲ್ವೆ ಯೋಜನೆ. ಈ ಸಂಬಂಧ ಕೊಂಕಣ ರೈಲ್ವೆಯೊಂದಿಗೆ ಮಾತುಕತೆ ನಡೆದಿದೆ. ಕೊಂಕಣ ರೈಲ್ವೆ ರೈಲು ಓಡಾಟದ ಬಗ್ಗೆ ಸಾಧ್ಯತಾ ವರದಿಯೊಂದನ್ನೂ ನೀಡಿದೆ. ಕುಮಟಾವರೆಗೆ ವಿಸ್ತರಿಸುವಂತೆಯೂ ಮನವಿ ಮಾಡಿದೆ ಎನ್ನಲಾಗಿದೆ.
ಬೆಳಗ್ಗೆ 7.20ಕ್ಕೆ ಮಂಗಳೂರು ಸೆಂಟ್ರಲ್ನಿಂದ ಬಿಡುವ ರೈಲು-12685 11.10ಕ್ಕೆ ಮುರ್ಡೆಶ್ವರ ತಲುಪಲಿದೆ. ನಂತರ 11.50ಕ್ಕೆ ಮುರ್ಡೆಶ್ವರದಿಂದ ವಾಪಸ್ ಬಿಡುವ ರೈಲು ಸಂಜೆ 4 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ. 4.55ಕ್ಕೆ ಚೆನ್ನೈ ಕಡೆಗೆ ಹೊರಡಲಿದೆ ಎಂದು ಸಾಧ್ಯತಾ ವರದಿ ಸಲ್ಲಿಸಿದೆ ಎನ್ನಲಾಗಿದೆ.
ಕಾರವಾರದವರೆಗೆ ವಿಸ್ತರಿಸಿ: ಕೇವಲ ಮುರ್ಡೆಶ್ವರದವರೆಗೆ ರೈಲನ್ನು ವಿಸ್ತರಿಸುವುದರಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಕಾರವಾರದವರೆಗೆ ರೈಲು ವಿಸ್ತರಿಸಿದರೆ, ಜಿಲ್ಲೆಯ ಕರಾವಳಿಗೆ ಅನುಕೂಲವಾಗಲಿದೆ. ಇಲ್ಲವೇ ಕನಿಷ್ಠ ಕುಮಟಾದವರೆಗಾದರೂ ರೈಲನ್ನು ವಿಸ್ತರಿಸಬೇಕು ಎಂಬುದು ರೈಲ್ವೆ ಪ್ರಯಾಣಿಕರ ಒತ್ತಾಯ.
ಚೆನ್ನೈ-ಮಂಗಳೂರು ರೈಲನ್ನು ವಿಸ್ತರಿಸುವ ಬಗ್ಗೆ ಮಾತುಕತೆ ನಡೆದಿದ್ದು ಸತ್ಯ. ಆದರೆ, ಕುಮಟಾದವರೆಗೆ ವಿಸ್ತರಿಸಬೇಕೋ ಅಥವಾ ಮುರ್ಡೆಶ್ವರದವರೆಗೆ ವಿಸ್ತರಿಸಬೇಕೋ ಎಂಬುದು ಇದುವರೆಗೂ ಅಂತಿಮವಾಗಿಲ್ಲ.| ಬಿ.ಬಿ. ನಿಕ್ಕಂ ಆರ್ಆರ್ಎಂ ಕಾರವಾರಚೆನ್ನೈ-ಮಂಗಳೂರು ರೈಲನ್ನು ಮುರ್ಡೆಶ್ವರದವರೆಗೆ ವಿಸ್ತರಿಸುವುದರಿಂದ ಜಿಲ್ಲೆಯ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಈ ಪ್ರಸ್ತಾವವನ್ನು ಕೊಂಕಣ ರೈಲ್ವೆ ಒಪ್ಪಿಕೊಳ್ಳಬಾರದು. ರೈಲನ್ನು ಕಾರವಾರ ಅಥವಾ ಕನಿಷ್ಠ ಕುಮಟಾದವರೆಗಾದರೂ ವಿಸ್ತರಿಸಬೇಕು.| ರಾಜೀವ ಗಾಂವಕರ್ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿಈ ವಿಷಯ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಚೆನ್ನೈ-ಮಂಗಳೂರು ರೈಲನ್ನು ಕಾರವಾರದರೆಗೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ.| ದಿನಕರ ಶೆಟ್ಟಿಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ