ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ ಮಾಡುವ ಕುರಿತು ಗ್ರಾಮಸ್ಥರು ಸಂಸದ ರಮೇಶ ಜಿಗಜಿಣಗಿ ಅವರ ಜತೆ ಚರ್ಚಿಸಿದರು. ಅಪ್ಪಾಶ ಕಾಂಬಳೆ, ಸಂಗಮೇಶ ಮುಜಗೊಂಡ, ಜಗನ್ನಾಥ ಕೋಟೆ ಇತರರಿದ್ದರು. 
ಜಿಲ್ಲೆ

ಎಕ್ಸಪ್ರೆಸ್ ರೈಲು ಲಚ್ಯಾಣಕ್ಕೆ ನಿಲುಗಡೆಗೆ ಒತ್ತಾಯ

Vijayapura - Desk - Chinnayya Chinnayyanamath

ಇಂಡಿ: ರೈಲು ನಿಲ್ಲದ ಕಾರಣ ಲಚ್ಯಾಣದ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ದರ್ಶನಕ್ಕೆ ಎಕ್ಸಪ್ರೆಸ್ ರೈಲಿನ ಮೂಲಕ ಬರುವ ಭಕ್ತರು ದೂರದ ಇಂಡಿ ರೈಲು ನಿಲ್ದಾಣವರೆಗೆ ಸಂಚರಿಸುವಂತಾಗಿದೆ. ಆದ್ದರಿಂದ ನಿತ್ಯ ಎಕ್ಸಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ಗ್ರಾಮಸ್ಥರು ಲಚ್ಯಾಣ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಶುಕ್ರವಾರ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಈಗಾಗಲೇ ಮೇಲಧಿಕಾರಿಗಳ ಜತೆ ಮಾತನಾಡಿದ್ದು ಕೆಲವು ರೈಲು ನಿಲುಗಡೆಗೆ ಭರವಸೆ ನೀಡಿದ್ದಾರೆ. ಬರುವ ದಿನಗಳಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ ಆಗಲಿದೆ ಎಂದರು.

ಸ್ಥಳೀಯ ಡಿಎಸ್‌ಎಸ್ ಮುಖಂಡ ಅಪ್ಪಾಶ ಕಾಂಬಳೆ ಮಾತನಾಡಿ, ಮಳೆಯಾದರೆ ಸುರಕ್ಷಿತ ಆಸರೆ ಇಲ್ಲ, ರಾತ್ರಿ ವೇಳೆ ಪ್ಲಾಟ್ ಾರ್ಮ ಮೇಲೆ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ, ಕಳಪೆ ಕಾಮಗಾರಿಯಿಂದ ಆಸನಕ್ಕೆ ಅಳವಡಿಸಿದ ಪರ್ಸಿ ಕಿತ್ತುಹೋಗಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ. ಎಲ್ಲವನ್ನೂ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಸಂಗಮೇಶ ಮುಜಗೊಂಡ ಮಾತನಾಡಿ, ಗ್ರಾಮದಲ್ಲಿನ ರೈಲ್ವೆ ಗೇಟ್‌ನಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೆ ರೈಲ್ವೆ ಸೇತುವೆ, ಇಲ್ಲ ಅಂಡರ್ ಪಾಸ್ ಮಾರ್ಗ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ತಾಪಂ ಮಾಜಿ ಸದಸ್ಯ ಜಗನ್ನಾಥ ಕೋಟೆ, ಗ್ರಾಪಂ ಸದಸ್ಯ ಅಶೋಕಗೌಡ ಪಾಟೀಲ, ಯಶವಂತ ಬಿರಾದಾರ, ಭೀಮರಾಯಗೌಡ ಪಾಟೀಲ, ಮಲ್ಲೇಶಿ ಮುಜಗೊಂಡ ಇತರರಿದ್ದರು. ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ ಇತರರಿದ್ದರು.