ಸಿರಿಗೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪಂಚಾಕ್ಷರಿ ಸಂಸ್ಕೃತಿಕ ಕಲಾ ಟ್ರಸ್ಟ್‌ವತಿಯಿಂದ ರತಿ ಕಲ್ಯಾಣ ಬಯಲಾಟ ಪ್ರದರ್ಶಿಸಲಾಯಿತು.  
ಜಿಲ್ಲೆ

ಬಯಲಾಟ ಕಲೆ ಉಳಿಸಿ ಬೆಳೆಸಿ

ರುದ್ರಪ್ಪ ವಾಲಿ

ಸಿರಿಗೇರಿ: ಪೌರಾಣಿಕ ಬಯಲಾಟಗಳು ಸಾಮಾಜಿಕ ಸಂದೇಶ ನೀಡುತ್ತವೆ ಎಂದು ತಾಪಂ ಮಾಜಿ ಸದಸ್ಯ ಬಕಾಟೆ ಈರಯ್ಯ ತಿಳಿಸಿದರು.

ಗ್ರಾಮದ ಹಳೆಯ ಚಿತ್ರಮಂದಿರ ಹತ್ತಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪಂಚಾಕ್ಷರಿ ಸಂಸ್ಕೃತಿಕ ಕಲಾ ಟ್ರಸ್ಟ್‌ವತಿಯಿಂದ ಗುರುವಾರ ಆಯೋಜಿಸಿದ್ದ ‘ರತಿ ಕಲ್ಯಾಣ’ ಬಯಲಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಅಳಿವಿನಂಚಿನಲ್ಲಿರುವ ಬಯಲಾಟವನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ಪ್ರಾಕೃಪ ಸಹಕಾರಿ ಸಂಘದ ನಿರ್ದೇಶಕರಾದ ಭಜಂತ್ರಿ ರಮೇಶ, ಪವಾಡಿ ನಾಯಕ ಮಾತನಾಡಿ, ಯುವಕರು ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಪೌರಾಣಿಕ ಮಹತ್ವ ಸಾರುವ ಅಂಶಗಳನ್ನು ಅರಿತುಕೊಳ್ಳಬೇಕು ಎಂದರು.

ಹಾರ್ಮೋನಿಯಂ ವಾದಕ ತಿಪ್ಪೇಸ್ವಾಮಿ, ತಬಲಾ ವಾದಕ ಕೆ ಭೀಮೇಶ, ಒರ್ವಾಯಿ ಹೊನ್ನೂರಪ್ಪ, ಊರುಗುಬ್ಬಿ ವೀರೇಶ, ತಾಳೂರು ನವೀನ್ ಕುಮಾರ್, ಜ್ಯೋತಿ, ಕೋಟಿ ಆಂಜಿನೆಮ್ಮ, ವೀರೇಶ, ಮುದಿಯಪ್ಪ, ಬಕಾಟೆ ವೀರೇಶ, ಧಾತ್ರಿ ಸಂಘದ ಕಾರ್ಯದರ್ಶಿ ಮಂಜು, ಎರ‌್ರಿಸ್ವಾಮಿ ಇತರರಿದ್ದರು.