ಜಿಲ್ಲೆ

ಕಾರವಾರ ಬಂದರಿನಿಂದ ರಫ್ತು ಪ್ರಕ್ರಿಯೆ ಸ್ಥಗಿತ

Uttara Kannada - Subash Hegde

ಕಾರವಾರ: ಕರ್ನಾಟಕ ಮೆರಿಟೈಮ್ ಬೋರ್ಡ್ ರಚನೆಯಾದರೆ ಬಂದರು ಚಟುವಟಿಕೆಗಳು ಚುರುಕುಗೊಳ್ಳುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮೆರಿಟೈಮ್ ಬೋರ್ಡ್ ಹೊಸ ಖಾಸಗಿ ಬಂದರುಗಳ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿದೆಯೇ ಹೊರತು. ಇದ್ದ ಬಂದರುಗಳ ಆದಾಯ ವೃದ್ಧಿಗೆ ಗಮನ ಹರಿಸುತ್ತಿಲ್ಲ. ಇದರಿಂದ ಕಾರವಾರ ವಾಣಿಜ್ಯ ಬಂದರಿನ ಆದಾಯ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿಯುತ್ತಿದೆ. ಬಂದರಿನ ನೀತಿ ಹಾಗೂ ಸುಂಕ ಹೆಚ್ಚಳ ಮುಂತಾದ ಕಾರಣಗಳಿಗೆ ಕಾರವಾರದಲ್ಲಿ ರಫ್ತು ಚಟುವಟಿಕೆಗಳು ಬಂದ್ ಆಗಿದೆ. ಸ್ಥಳೀಯ ಸೀಬರ್ಡ್ ನೌಕಾನೆಲೆಗೆ ಎಚ್‌ಎಸ್‌ಡಿ (ಡೀಸೆಲ್) ಹಾಗೂ ಬಿಣಗಾದ ಗ್ರಾಸಿಂ ಇಡಸ್ಟ್ರೀಸ್‌ ಬರುವ ರಾಕ್ ಸಾಲ್ಟ್‌ ಮಾತ್ರ ಕಾರವಾರ ಬಂದರಿನ ದೊಡ್ಡ ಆದಾಯದ ಮೂಲಗಳಾಗಿವೆ. ರಾಜ್ಯದ ಇತರ ಯಾವುದೇ ಉದ್ಯಮಗಳು ಕಾರವಾರ ಬಂದರಿನ ಮೂಲಕ ವಹಿವಾಟನ್ನು ನಿಲ್ಲಿಸಿವೆ. ಬಂದರು ಇಲಾಖೆಯ ಅಡಿ ಕಾರವಾರ ಹಾಗೂ ಮಂಗಳೂರು ಬಂದರುಗಳಿದ್ದವು. ಇಲಾಖೆಯಿಂದ ತ್ವರಿತ ಕಾರ್ಯ ನಿರ್ವಹಣೆ ಸಾಧ್ಯವಿಲ್ಲ. ಇದರಿಂದ ರಾಜ್ಯದಲ್ಲಿ ಬಂದರು ಚಟುವಟಿಕೆ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ. ಜಲಸಾರಿಗೆ ಮಂಡಳಿ ಸ್ಥಾಪನೆ ಮಾಡಿದರೆ ಬಂದರು ಅಭಿವೃದ್ಧಿ ಕಾರ್ಯಗಳು ಬೇಗನೇ ಆಗಲಿವೆ ಎಂದು ಯೋಜಿಸಿ 2015 ರಲ್ಲಿ ಕರ್ನಾಟಕ ಮೆರಿಟೈಮ್ ಬೋರ್ಡ್ ಬಿಲ್‌ನ್ನು 2017 ರಲ್ಲಿ ಪ್ರಕಟಿಸಲಾಯಿತು. 2018 ರಿಂದ ಕಾರವಾರದಲ್ಲಿ ಕೇಂದ್ರ ಕಚೇರಿಯಾಗಿಸಿಕೊಂಡು ಕರ್ನಾಟಕ ಮೆರಿಟೈಮ್ ಬೋರ್ಡ್ ಕಾರ್ಯ ನಿರ್ವಹಿಸುತ್ತಿದೆ. ಅದರಡಿ ಕಾರವಾರ ಹಾಗೂ ಮಂಗಳೂರು ಬಂದರುಗಳನ್ನು ನೀಡಲಾಗಿದೆ.

ಆದಾಯದಲ್ಲಿ ನಿರಂತರ ಇಳಿಕೆ:

2022-23 ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಕಾರವಾರ ಬಂದರು 21 ಕೋಟಿ ರೂ. ನೇರ ಆದಾಯ ಗಳಿಸಿತ್ತು. ಆದರೆ, 2023- 2024 ರಲ್ಲಿ ಅದು 18 ಕೋಟಿ ರೂ.ಗೆ ಇಳಿಕೆಯಾಗಿತ್ತು. 2024-25 ನೇ ಸಾಲಿನ ಆದಾಯ 13.02 ಕೋಟಿಗೆ ಇಳಿಕೆಯಾಗಿದೆ. ಈ ವರ್ಷ 97 ಹಡಗುಗಳು ಮಾತ್ರ ವಾಣಿಜ್ಯ ಬಂದರಿಗೆ ಬಂದಿದ್ದು, ಒಟ್ಟಾರೆ 5.50 ಲಕ್ಷ ಮೆಟ್ರಿಕ್ ಟನ್ ಮಾತ್ರ ಸರಕುಗಳ ವ್ಯವಹಾರ ನಡೆಸಿದೆ. ಬಂದರು ವ್ಯವಸ್ಥೆಯಲ್ಲಿ ಸುಧಾರಣೆ ತಾರದೇ ಇರುವುದು ಇದಕ್ಕೆ ಕಾರಣ ಎಂದು ಬಂದರು ಆಮದು, ರಫ್ತು ಏಜೆಂಟರ ಅಭಿಪ್ರಾಯವಾಗಿದೆ. ಹೂಳು ತುಂಬಿದ್ದರಿಂದ ಹಡಗುಗಳು ಬರುತ್ತಿಲ್ಲ ಎಂದು ಬಂದರು ಅಧಿಕಾರಿಗಳು ಕಾರಣ ನೀಡುತ್ತಿದ್ದರು. ಆದರೆ, ಈಗ ಹೂಳು ತೆಗೆದ ನಂತರವೂ ಬಂದರು ಚಟುವಟಿಕೆ ಮಾತ್ರ ಚುರುಕುಗೊಂಡಿಲ್ಲ. ರಫ್ತು ಸಂಪೂರ್ಣ ಬಂದ್

  • ಸದ್ಯ ಕಾರವಾರ ಬಂದರಿನಿAದ ಆಮದು ಚಟುವಟಿಕೆಗಳು ಮಾತ್ರ ನಡೆಯುತ್ತಿದೆ ಎಂಬAತಾಗಿದೆ. ರಫ್ತು ಚಟುವಟಿಕೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕೇವಲ 4,954 ಮೆಟ್ರಿಕ್ ಟನ್‌ಗಳಷ್ಟು ಇಂಧನವನ್ನು ಮಾತ್ರ ಈ ಆರ್ಥಿಕ ವರ್ಷದಲ್ಲಿ ರಫ್ತು ಮಾಡಲಾಗಿದೆ. ಈ ಹಿಂದೆ ಕಾರವಾರ ಬಂದರಿನಿಂದ ಕಬ್ಬಿಣದ ಅದಿರು, ಗ್ರಾನೈಟ್, ಮೊಲೈಸಿಸ್(ಕಾಕಂಬಿ)ಯನ್ನು ಮುಂತಾದವುಗಳನ್ನು ರಫ್ತು ಮಾಡಲಾಗುತ್ತಿತ್ತು. ಅದಿರು ಚಟುವಟಿಕೆ ಬಂದಾದ ನಂತರವೂ ಇತರ ಕೆಲವು ವಸ್ತುಗಳು ರಫ್ತಾಗುತ್ತಿದ್ದವು. 2022-23 ರಲ್ಲಿ 5.97 ಲಕ್ಷ ಮೆಟ್ರಿಕ್ ಟನ್, 2023-24 ನೇ ಸಾಲಿನಲ್ಲಿ 1.97 ಲಕ್ಷ ಮೆಟ್ರಿಕ್ ಟನ್ ಮೊಲೈಸಿಸ್‌ನ್ನು ಯೂರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು. ಆದರೆ, ಈ ವರ್ಷ ಒಂದೇ ಒಂದು ಹಡಗೂ ಕೂಟ ಮೊಲೈಸಿಸ್ ತುಂಬಿಕೊಂಡು ಸಾಗಿಲ್ಲ. ಎಥನಾಲ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮೊಲೈಸಿಸ್ ರಫ್ತಿನ ಮೇಲಿನ ಸುಂಕವನ್ನು ಶೇ.15 ರಿಂದ ಶೇ.50 ಕ್ಕೆ ಏರಿಸಿರುವುದೇ ಇದಕ್ಕೆ ಕಾರಣ ಎಂದು ಬಂದರು ಅಽಕಾರಿಗಳು ತಿಳಿಸಿದ್ದಾರೆ. ಬಂದರು ಆದಾಯದಲ್ಲಿ ಇಳಿಕೆಯಾಗಲು ಕಾರಣಗಳು *ಇತರ ರಾಜ್ಯಗಳ ಕೆಲ ಬಂದರುಗಳಿಗಿಂತ ಕಾರವಾರ ಬಂದರಿನ ಶುಲ್ಕ ಜಾಸ್ತಿ *ಬಂದರು ವಹಿವಾಟಿನ ವ್ಯವಹಾರ ಕ್ಲಿಸ್ಟವಾಗಿರುವುದು, ಭ್ರಷ್ಟಾಚಾರ *ಬಂದರಿನಲ್ಲಿ ಹೂಳಿನ ಸಮಸ್ಯೆ, ಡ್ರಜ್ಜಿಂಗ್ ಮಾಡಿದರೂ ಬಾರದ ದೊಡ್ಡ ಹಡಗುಗಳು *ಬಂದರಿನಲ್ಲಿ ನೈಟ್ ನೇವಿಗೇಶನ್ ವ್ಯವಸ್ಥೆ ಹೆಸರಿಗೆ ಮಾತ್ರ ಇದೆ *ಆಹಾರ ಧಾನ್ಯ, ಗೊಬ್ಬರ ಮುಂತಾದ ವಸ್ತುಗಳ ಆಮದು, ರಫ್ತು ಚಟುವಟಿಕೆಗೆ ಸಮರ್ಪಕ ಗೋಡೌನ್ ವ್ಯವಸ್ಥೆ ಇಲ್ಲ *ಕಾರವಾರ ಬಂದರಿನಿಂದ ಬಿಟುಮಿನ್,(ಡಾಂಬರು), ಅಡುಗೆ ಎಣ್ಣೆ ಆಮದು ಪ್ರಮಾಣ ಗಣನೀಯ ಇಳಿಕೆ
ಮೊಲೈಸಿಸ್ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಿದ್ದು, ಕಾರವಾರ ಬಂದರಿನ ಆದಾಯದ ಮೇಲೆ ದೊಡ್ಡ ಹೊಡೆದ ಬಂದಿದೆ. ಇದರಿಂದ ಮೊಲೈಸಿಸ್ ರಫ್ತು ನಿಂತಿದೆ. ಕ್ಯಾ.ಸಿ.ಸ್ವಾಮಿ ಬಂದರು ಇಲಾಖೆ ನಿರ್ದೇಶಕ