ಬೆಂಗಳೂರು: ಕಬ್ಬಿಣದ ಸಿಲಿಂಡರ್ಗಳ ಸ್ಪೋಟದಿಂದ ಉಂಟಾಗುವ ಅನಾಹುತ ತಡೆಗಟ್ಟಲು ‘ಗೋ ಗ್ಯಾಸ್’ ಕಂಪನಿ ಎಲೈಟ್ ಕಾಂಪೋಸಿಟ್ ಸಂಯೋಜಿತ ತಂತ್ರಜ್ಞಾನದಿಂದ ಸ್ಫೋಟ ನಿರೋಧಕ ಸಿಲಿಂಡರ್ ಪರಿಚಯಿಸಿದೆ. ಜತೆಗೆ ಗ್ರಾಹಕರು ಸರಳವಾಗಿ ಹಾಗೂ ತ್ವರಿತವಾಗಿ ಗ್ಯಾಸ್ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಿದೆ. ಸಾಮಾನ್ಯ ಸಿಲಿಂಡರ್ಗೆ ಹೋಲಿಸಿದರೆ ಗೋಗ್ಯಾಸ್ ಸಿಲಿಂಡರ್ ತೂಕದಲ್ಲಿ ಅರ್ಧದಷ್ಟು ಕಡಿಮೆ ಇದೆ. ಜತೆಗೆ ಹೆಚ್ಚು ಬಾಳಿಕೆ ಬರುತ್ತದೆ. ವೃದ್ಧರೂ ಕೂಡ ಸುಲಭವಾಗಿ ಇದನ್ನು ಸಾಗಿಸಬಹುದು. ಸಿಲಿಂಡರ್ ಪಾರದರ್ಶಕವಾಗಿರುವುದರಿಂದ ಎಷ್ಟು ಪ್ರಮಾಣದ ಅನಿಲ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.
ಸುಲಭ ಸಂಪರ್ಕ: ಪ್ರತಿ ತಿಂಗಳು 1 ಕೋಟಿ ಜನ ವಿವಿಧ ಕಾರಣಗಳಿಗಾಗಿ ವಾಸಸ್ಥಳ ಬದಲಿಸುತ್ತಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಎಲೈಟ್ ಗೋಗ್ಯಾಸ್ ತ್ವರಿತ ಎಲ್ಪಿಜಿ ಸಂಪರ್ಕಗಳನ್ನು ಸುಲಭವಾಗಿ ಒದಗಿಸುತ್ತದೆ. ವರ್ಗಾವಣೆ ಸಂದರ್ಭದಲ್ಲಿ ಇತರ ನಗರಗಳಲ್ಲಿಯೂ ಸುಲಭವಾಗಿ ಸಂಪರ್ಕ ಪಡೆಯಲು ಅವಕಾಶ ನೀಡುತ್ತಿದೆ. ನವ ವಿವಾಹಿತರಿಗೆ ಉಡುಗೊರೆಯಾಗಿಯೂ ಇದನ್ನು ಕೊಡಬಹುದಾಗಿದೆ.
22 ರಾಜ್ಯಗಳಲ್ಲಿ ಸೇವೆ: ದೇಶದ 22 ರಾಜ್ಯಗಳಲ್ಲಿ 1,200ಕ್ಕೂ ಹೆಚ್ಚು ವಿತರಕರು ಮತ್ತು ವ್ಯಾಪಾರಿಗಳು ಗ್ರಾಹಕರ ಸೇವೆಗೆ ಲಭ್ಯವಿದ್ದಾರೆ. ಸಿಲಿಂಡರ್ ಮರುಪೂರಣ ಮತ್ತು ಪೂರೈಕೆ ಮಾಡಲು 58 ಬಾಟ್ಲಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ರಾಜ್ಯದಲ್ಲಿನ ಸಂಪರ್ಕವನ್ನು ಮತ್ತೊಂದು ರಾಜ್ಯದಲ್ಲೂ ಪಡೆದುಕೊಳ್ಳುವ ಸೌಲಭ್ಯವಿದೆ. ಗೋಗ್ಯಾಸ್ ಖಾಸಗಿ ಎಲ್ಪಿಜಿ ಕಂಪನಿಯಾಗಿ ರುವುದರಿಂದ, ಸರ್ಕಾರಿ ಕಂಪನಿಗಳಂತೆ ಸಬ್ಸಿಡಿ ಸಿಗುವುದಿಲ್ಲ.
4,499 ರೂ.ಗೆ ಗ್ಯಾಸ್ ಕಿಟ್ - 650 ರೂ. ಎಲ್ಪಿಜಿ ಶುಲ್ಕ
ಗ್ಯಾಸ್ ಸಂಪರ್ಕಕ್ಕೆ ಹತ್ತಿರದ ಗೋ ಗ್ಯಾಸ್ ವ್ಯಾಪಾರಿಗಳಿಗೆ ಗುರುತಿನ ಚೀಟಿ, ವಿಳಾಸದ ಮಾಹಿತಿ ಜತೆಗೆ 4,499 ರೂ. ಪಾವತಿಸಿದರೆ 10 ಕೆ.ಜಿ. ಸ್ಫೋಟ ನಿರೋಧಕ ಗ್ಯಾಸ್ ಸಿಲಿಂಡರ್, ಗ್ಲಾಸ್ ಟಾಪ್ನ 3 ಬರ್ನರ್ ಗ್ಯಾಸ್ ಸ್ಟೌ, ರೆಗ್ಯುಲೇಟರ್, ಪೈಪುಗಳನ್ನು ನೀಡಲಾಗುತ್ತದೆ. ಜತೆಗೆ ಎಲ್ಪಿಜಿ ಶುಲ್ಕವಾಗಿ ಹೆಚ್ಚುವರಿ 650 ರೂ. ಪಾವತಿಸುವುದು ಕಡ್ಡಾಯವಾಗಿದೆ.