ತುಮಕೂರು: ಕೃತಕ ಬುದ್ದಿಮತ್ತೆ ಮತ್ತು ಮಿಷನ್ ಲರ್ನಿಂಗ್ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳುವಳಿಕೆಯಾಗಿದ್ದು ವಾಸ್ತವದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಐಐಟಿ ಧಾರವಾಡದ ನಿರ್ದೇಶಕ ಡಾ.ಎಸ್.ಆರ್.ಮಹದೇವಪ್ರಸನ್ನ ಅಭಿಪ್ರಾಯಪಟ್ಟರು.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನಲ್ಲಿ ಎಐಸಿಟಿಇ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ "ಎಕ್ಸ್ಪ್ರ್ಲೇರಿಂಗ್ ಎಐ ಆ್ಯಂಡ್ ಎಂಎಲ್ ಫಾರ್ ಬೆಟರ್ ಟು ಮಾರೋ' ವಿಷಯ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ,ದಿಕ್ಸೂಚಿ ಭಾಷಣ ಮಾಡಿ, 90ರ ದಶಕದಲ್ಲಿ ಕಂಪ್ಯೂಟರ್ ಬಂದಾಗಲೂ ಇದೇ ರೀತಿಯ ಚರ್ಚೆಗಳು ನಡೆದವು.ಆದರೆ, ಇಂದು ಅತಿ ಹೆಚ್ಚು ಉದ್ಯೋಗ ಸೃಷ್ಠಿ ಮಾಡುವ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನವೂಒಂದಾಗಿದೆ. ಹಾಗೆಯೇ ಎಐ ಮತ್ತುಎಂಎಲ್ ಬಳಕೆಯಿಂದ ಉದ್ಯೋಗ ನಷ್ಟವಾಗುವುದಿಲ್ಲ ಎಂಬುದು ಸ್ಪಷ್ಟ ಎಂದು ಅಭಿಪ್ರಾಯಪಟ್ಟರು.
ಎಐ ಮತ್ತುಎಂಎಲ್ ಹಾಗೂ ಕಂಪ್ಯೂಟರ್ಇಂಜಿನಿಯರ್ಸ್ ಒಂದಕ್ಕೊಂದು ಪೂರಕವಾಗಿವೆ.ಆದರೆ ಸಾಪ್ಟವೇರ್ಎಂಜಿನಿಯರ್ಗಿಂತ ವೇಗವಾಗಿ ಮತ್ತು ನಿಖರವಾಗಿ ಎಐ ಮತ್ತುಎಂಎಲ್ ಕೆಲಸ ಮಾಡಲಿವೆ. ಡೆಟಾ ಮಾನ್ಯೇಜ್ಮೆಂಟ್ ಮತ್ತು ಅನಾಲಿಸಿಸ್ನಲ್ಲಿ ಎಐ ಅತ್ಯಂತ ಪ್ರಕರವಾಗಿಕಾರ್ಯನಿರ್ವಹಿಸಲಿದೆ. ಇಂದಿನ ಡಿಜಿಟಲ್ಯುಗದಲ್ಲಿತಂತ್ರಜ್ಞಾನಗೊತ್ತಿಲ್ಲದವರು ಕೆಲಸ ಮಾಡುವುದು ಕೊಂಚ ದುಸ್ತರವಾಗಿದೆ. ಆದರೆ ಎಐ ಮತ್ತುಎಲ್ ಬಳಕೆಯಿಂದ ಸರಾಗವಾಗಿಡಿಜಿಟಲ್ತಂತ್ರಜ್ಞಾನವನ್ನು ಬಳಕೆ ಮಾಡಬಹುದು ಎಂದು ತಿಳಿಸಿದರು.
ಎಐ ಮತ್ತುಎಂಎಲ್ ವ್ಯಕ್ತಿಯ ಕೋರಿಕೆಯನ್ನುಅರ್ಥ ಮಾಡಿಕೊಂಡುಆತನದ್ದೇ ಸ್ಥಳಿಯ ಭಾಷೆಯಲ್ಲಿ ಮಾತನಾಡಿ, ಆತನ ಕೆಲಸವನ್ನು ಸುಲಭಗೊಳಿಸಲಿದೆ. ಇದರಿಂದ ಸಮಯದ ಉಳಿತಾಯದ ಜತೆಗೆ, ಕೆಲಸದ ವೇಗವು ಹೆಚ್ಚಲಿದೆ. ಮದ್ಯವರ್ತಿಯಿಲ್ಲದೆ ಜನಸಾಮಾನ್ಯರು ತಮ್ಮದೈನಂದಿನ ಕೆಲಸವನ್ನು ನಿರ್ವಹಿಸಬಹುದಾಗಿದೆ. ಇದರಿಂದ ಭವಿಷ್ಯದ ಸಮಾಜಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಡಾ.ಮಹೇಶ್ ಪಂಡಿತ್ ಮಾತನಾಡಿ, ಭಾರತ ಯಂಗ್ಇಂಡಿಯಾ ಮುಂದಿನ 30 ವರ್ಷಗಳ ಕಾಲ ದುಡಿಯುವ ವಯಸ್ಸಿನ ಯುವಕರು ನಮ್ಮಲ್ಲಿದ್ದಾರೆ. ಅಲ್ಲದೆ ತಂತ್ರಜ್ಞಾನದ ಭಾರತ ಮತ್ತು ಹಲವಾರು ಕೊರತೆ ಎದುರಿಸುತ್ತಿರುವ ಭಾರತ. ಇಂತಹ ಭಾರತ ಎಐ ಮತ್ತುಎಂಎಲ್ ಬಳಕೆಯಿಂದ ಸದೃಢಭಾರತವಾಗಿ ಬದಲಾಗಲು ಸಾಧ್ಯವಿದೆ ಎಂದು ಹೇಳಿದರು.
ಇದಕ್ಕಾಗಿ ನಾವುಗಳು ಕೈಗಾರಿಕೆಗಳ ಅಗತ್ಯತೆ ಮತ್ತು ಶಿಕ್ಷಣದ ನಡುವಿನ ಕೊರತೆ ನಿಗಿಸಬೇಕಿದೆ.ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಆಗಬೇಕು. ಯುವ ಜನರು ಯಾವುದೇ ವಿಚಾರದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು. ತಮಗೆ ಸಿಗುವ ಮಾಹಿತಿಯನ್ನು ತಲಾನಾತ್ಮಕವಾಗಿ ಅಧ್ಯಯನ ಮಾಡಬೇಕು, ಒಳ್ಳೆಯ ಸಂಪರ್ಕದ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಮಾತನಾಡಿ, ನಾವೆಲ್ಲರೂ ತಂತ್ರಜ್ಞಾನದ ಯುಗದಲ್ಲಿದ್ದೇವೆ.ಹೊಸ ತಂತ್ರಜ್ಞಾನಗಳು ಬಂದಾಗ ಆತಂಕಉಂಟಾಗುವುದು ಸಹಜ. ಲಭ್ಯವಿರುವ ಮತ್ತು ಹೊಸದಾಗಿ ಬರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು, ಆ ಮೂಲಕ ಸ್ಮಾರ್ಟ್ ವರ್ಲ್ಡ್ಕಟ್ಟುವ ನಿಟ್ಟಿನಲ್ಲಿ ಮುನ್ನೆಡೆಯಬೇಕಿದೆ ಎಂದರು.
ಸಂಯೋಜಕಿ ಎಂ.ಮಮತ ಮಾತನಾಡಿ,ಬೇರೆ ಬೇರೆ ಕ್ಷೇತ್ರಗಳಲ್ಲಿ ಹೇಗೆ ಎಐ ಬಳಕೆ ಮಾಡಬಹುದು, ಎಐ ಬಳಕೆ ಮಾಡುವ ನಿಟ್ಟಿನಲ್ಲಿಜನರಲ್ಲಿಜಾಗೃತಿ ಮೂಡಿಸುವುದು, ಮೀಡಿಯಾ, ಕಾನೂನು,ಆರೋಗ್ಯ, ಶಿಕ್ಷಣ ಹಾಗೂ ಸೈಬರ್ಕ್ರೆೃಮತಡೆಯಲು ಹೇಗೆ ಬಳಕೆ ಮಾಡಬಹುದು ಎಂಬುದರ ಕುರಿತು ಇಂದಿನ ವಿಚಾರ ಸಂಕಿರಣ ಹೆಚ್ಚಿನ ಬೆಳಕು ಚಲ್ಲಲಿದೆ. ವಿವಿಧಇಂಜಿನಿಯರಿಂಗ್ ಕಾಲೇಜುಗಳು 93ಕ್ಕೂ ಹೆಚ್ಚು ಪ್ರಂಬಂಧಗಳು ಮಂಡನೆಯಾಗಲಿವೆ, ಸುಮಾರು 200ಕ್ಕು ಹೆಚ್ಚು ಪ್ರತಿನಿಧಿಗಳು ಈ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ, ಎಐಸಿಟಿಇ ಅಡಿಯಲ್ಲಿ ನಡೆಯುತ್ತಿರುವ ಈ ವಿಚಾರ ಸಂಕಿರಣ ಭವಿಷ್ಯದ ಭಾರತವನ್ನುಕುರಿತಾಗಿದೆ.ತಂತ್ರಜ್ಞಾನ ಬಳಕೆಯಿಂದ ಜನಸಾಮಾನ್ಯರ ಭವಣೆತೀರಿಸುವ ಕೆಲಸಕ್ಕೆ ಇಂತಹ ವಿಚಾರ ಸಂಕೀರಣಗಳು ಮುನ್ನುಡಿ ಬರೆಯಲಿ ಎಂದರು.
ಪ್ರಾಚಾರ್ಯ ಡಾ.ನಿಜಲಿಂಗಪ್ಪ, ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಕೆ.ಎಸ್.ಲಿಂಗದೇವರಪ್ಪ, ಡಾ.ಹೇಮಲತಾ ಮತ್ತಿತರರು ಇದ್ದರು.