ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆ ಪಾಸ್ ಆಗುವುದು ಕಠಿಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ತಯಾರಿ ಮಾಡಿದರೂ ನೀಟ್ ಪರೀಕ್ಷೆ ತೇರ್ಗಡೆಯಾಗುವುದು ಕಷ್ಟವಾಗಿದೆ. ಆದರೆ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಖರ ನೀಟ್ ತರಬೇತಿ ನೀಡಿ ಯಶಸ್ಸು ಸಾಧಿಸಲು ಶ್ರಮಿಸುತ್ತಿದೆ ಎಂದು ಕಾಲೇಜಿನ ಸಂಸ್ಥಾಪಕ ಹಾಗೂ ನಿರ್ದೇಶಕ ನಾಗೇಶ ದಂಡಾಪುರೆ ಹೇಳಿದರು.
2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ನೀಟ್ ಪರೀಕ್ಷೆ ಪಾಸಾಗಲು ಶ್ರಮಿಸಿದ ಶಿಕ್ಷಕ ಬಳಗವನ್ನು ಬೆಳಗಾವಿ ಎಕ್ಸ್‌ಪರ್ಟ್ ಪಿಯು ಕಾಲೇಜ್ ಬಳಗದಿಂದ ಈಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೂರದ ಮಂಗಳೂರು, ಬೆಂಗಳೂರು ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಅರಸಿ ಲಕ್ಷಾಂತರ ರೂ. ಖರ್ಚು ಮಾಡಿ ಅಲ್ಲಿಗೆ ಹೋಗುತ್ತಾರೆ. ಆದರೆ, ಫಲಿತಾಂಶದ ಪ್ರಮಾಣ ನೋಡಿದರೆ ಶೇ.30ಕ್ಕಿಂತಲೂ ಕಡಿಮೆ. ಈ ಸಮಸ್ಯೆ ನಿವಾರಣೆಗೆ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಿಖರವಾದ ನೀಟ್ ತರಬೇತಿ ಒದಗಿಸಲಾಗುತ್ತಿದೆ. ನಮ್ಮ ಕಾಲೇಜಿನ ಅನುಭವಿ ಉಪನ್ಯಾಸಕರಾದ ಸ್ಯಾಮುಯೆಲ್ ಠಾಕೂರ, ಸಚಿನ್ ಪಂಡರಪುರಕರ, ಅಮರೀಶ ಕುಮಾರ, ರೂಪೇಶ ಪಾಟೀಲ ಅವರು ತರಬೇತಿ ನೀಡುತ್ತಿದ್ದಾರೆ ಎಂದರು.
ಇದೇ ವೇಳೆ 2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 720ಕ್ಕೆ 671 ಅಂಕಗಳಿಸಿ ಎಂಬಿಬಿಎಸ್ ಸೀಟು ಪಡೆದ ವಿದ್ಯಾರ್ಥಿನಿ ಸಮೃದ್ಧಿ ಮೋರೆಗೆ ಸನ್ಮಾನಿಸಲಾಯಿತು.
ಮೈಲಾರ ತೆನಗಿ ಕಾಲೇಜಿನ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಗಜೇಂದ್ರ ಕುರಿ ಸ್ವಾಗತಿಸಿದರು. ಸಂಜೀವ ಕರವಿನಕೊಪ್ಪ ನಿರೂಪಿಸಿದರು. ನಾಗಯ್ಯ ಗುರುವಯ್ಯನವರ ವಂದಿಸಿದರು.
ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಉಪನ್ಯಾಸಕರ ತಂಡದ ನೀಟ್ ಪರೀಕ್ಷೆಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಎಕ್ಸ್‌ಪರ್ಟ್ ಕಾಲೇಜಿನ ಪ್ರಯೋಜನ ಪಡೆಯಬೇಕು. | ಸಮೃದ್ಧಿ ಮೋರೆ, ಸನ್ಮಾನಿತ ವಿದ್ಯಾರ್ಥಿನಿ