ಜಿಲ್ಲೆ

ಶುಚಿ, ರುಚಿಯಾದ ಅಡುಗೆ ತಯಾರಿ ಕಲೆ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಭಿಮತ

ಹರೀಶ ಎಂ.

ಮಂಗಳೂರು: ಶುಚಿ, ರುಚಿಯಾದ ಅಡುಗೆ ತಯಾರಿ ಕಲೆ ಮತ್ತು ವಿಜ್ಞಾನ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕಲಿಯಬೇಕಾದ ಕೌಶಲ್ಯಗಳಲ್ಲಿ ಅಡುಗೆ ಕೂಡ ಮುಖ್ಯವಾಗಿದೆ ಎಂದು ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಹೇಳಿದರು.


ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್ ಪೋಡಿಯಂನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ ಎಕ್ಸ್‌ಪರ್ಟ್ ಮಾಸ್ಟರ್ ಶ್ೆ ಸ್ಪರ್ಧೆ -2023 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬದುಕಿನಲ್ಲಿ ಉತ್ತಮ ರೀತಿಯಲ್ಲಿ ಅಡುಗೆ ಮಾಡುವುದನ್ನು ಕಲಿಯಲು ಪೂರಕವಾಗಲಿ ಎನ್ನುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದವರು ಹೇಳಿದರು.


ಓಶಿಯನ್ ಪರ್ಲ್‌ನ ಎಕ್ಸಿಕ್ಯೂಟಿವ್ ಶ್ೆ ದೇವಬೃತ್ ಮಂಡಲ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಅಡುಗೆ ಎನ್ನುವುದು ಕಲೆಯಾದರೆ ಅದರಲ್ಲಿ ಬಳಸುವ ವಸ್ತುಗಳನ್ನು ಕೂಡ ಅದೇ ರೀತಿ ಪರಿಗಣಿಸಿದಾಗ ಅದ್ಬುತವಾದ ಖಾದ್ಯ ಸೃಷ್ಟಿಯಾಗುತ್ತದೆ ಎಂದರು.


ಮುಖ್ಯ ಅತಿಥಿಯಾಗಿ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್ ಮಾತನಾಡಿ, ಅಡುಗೆ ಮಾಡುವವರು ಸಂತೋಷದಿಂದ ಅಡುಗೆ ಮಾಡಿದರೆ ಅದು ಎಲ್ಲರೂ ಸಂಭ್ರಮದಿಂದ ಸವಿಯುತ್ತಾರೆ. ಅಡುಗೆ ಬರೀ ಕಲೆ, ವಿಜ್ಞಾನ ಮಾತ್ರವಲ್ಲದೇ ಅದೊಂದು ಭಾವನಾತ್ಮಕ ವಿಚಾರಗಳಿಗೆ ಇಂಬುಕೊಡುವ ವಸ್ತುವಾಗಿದೆ. ನಮ್ಮ ದೇಶದ ಸಂಸ್ಕೃತಿಯ ಉಳಿದರೆ ಇಲ್ಲಿನ ಆಹಾರ ಪದ್ದತಿಗಳು ಉಳಿಯುತ್ತದೆ ಎಂದರು.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್ ಅಡುಗೆ ಸ್ಪರ್ಧೆಯ ಸ್ಪರ್ಧಿಗಳಿಗೆ ಶುಭಕೋರಿದರು. ಈ ಸಂದರ್ಭ ಸ್ಪರ್ಧೆಯ ಪ್ರಾಯೋಜಕರಾದ ಸ್ಪೈಸೀಸ್ ಆ್ಯಂಡ್ ಶ್ೆನ ಮ್ಯಾನೇಜಿಂಗ್ ಡೈರೆಕ್ಟರ್ ದಿನೇಶ್. ಪಿ ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಉಪಸ್ಥಿತರಿದ್ದರು.


ಸ್ಪರ್ಧೆಯ ತೀರ್ಪುಗಾರರಾದ ಎಸ್‌ಆರ್‌ಎಂ ಡಿಸ್ಟ್ರಿಬ್ಯೂಶನ್‌ನ ಮನಮೋಹನ್ ಪೈ, ಹೋಮ್ ಬೇಕಿಂಗ್ ಕ್ಷೇತ್ರದ ಅನನ್ಯಾ ಹರೀಶ್, ಮಿಲಾಗ್ರಿಸ್ ಕಾಲೇಜಿನ ಬಿಎಸ್‌ಸಿ ಹಾಸ್ಪಿಟಲಿಟಿ ಸೈನ್ಸ್‌ನ ಎಚ್‌ಒಡಿ ಡೆನ್ಜಿಲ್ ಡಿಕೋಸ್ತಾ, ಸಹ ತೀರ್ಪುಗಾರರಾದ ಅನುರಾಧ ಭಟ್ ಹಾಗೂ ಮಿಲಾಗ್ರಿಸ್ ಕಾಲೇಜಿನ ಉಪನ್ಯಾಸಕ ಅರಿತ್ ಜೋಯೆಲ್ ಪಿಂಟೋ ಉಪಸ್ಥಿತರಿದ್ದರು.