ಮಂಗಳೂರು: ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡು ಮೂಲಕ ಪ್ರಯಾಣಿಸುವ ಎಚ್.ನಿಝಾಮುದ್ದೀನ್- ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್ (12432/ 12431) ರೈಲಿಗೆ ನವದೆಹಲಿ ಸಮೀಪದ ರತ್ಲಮ್ ಜಂಕ್ಷನ್ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯ ನಿಲುಗಡೆ ಒದಗಿಸಲು ಇಲಾಖೆ ಸಚಿವಾಲಯ ತೀರ್ಮಾನಿಸಿದೆ.
ಹೆಚ್ಚುವರಿ ಬೋಗಿ: ಫೋರ್‌ಬಂದರ್- ಕೊಚುವೆಲಿ ಎಕ್ಸ್‌ಪ್ರೆಸ್ (20910/ 20909) ರೈಲಿಗೆ ಹೆಚ್ಚುವರಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಒಂದು ಸ್ಲೀಪರ್ ಬೋಗಿ ಹಾಗೂ ಹಿಸ್ಸರ್ ಜಂಕ್ಷನ್- ಕೊಯಮತ್ತೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (22476/ 22475) ರೈಲಿಗೆ 2 ಟೈರ್ ಎಸಿ ಒಂದು ಬೋಗಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.