ಬಿಡದಿ: ಬೆಂಗಳೂರು&ಮೈಸೂರು ದಶಪಥದ ಹನುಮಂತನಗರ ಕೋತಿ ಆಂಜನೇಯಸ್ವಾಮಿ ದೇವಾಲಯ ಬಳಿ ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸ್ಕೈ ವಾಕ್ ಕಾಮಗಾರಿ ವಿವಾದದ ನಡುವೆಯೂ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಜನಸಂಚಾರ ಶುರುವಾಗಿದೆ.
ಸ್ಕೈವಾಕ್ ನಿರ್ಮಾಣಕ್ಕೆ ಜಾಗ ಗುರುತು ಮಾಡಿದ ದಿನದಿಂದಲೇ ಒಂದಿಲ್ಲೊಂದು ವಿಘ್ನಗಳು ಶುರುವಾಗಿ, ಜಾಗದ ವಿಚಾರದ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ ನ್ಯಾಯಾಲಯ ಆದೇಶದ ನಡುವೆಯೂ ಕಾಮಗಾರಿ ಪೂರ್ಣಗೊಂಡು, ಪ್ರಾಯೋಗಿಕ ಸಂಚಾರಕ್ಕೆ ಹೆದ್ದಾರಿ ಪ್ರಾಧಿಕಾರ ಅನುವು ಮಾಡಿಕೊಟ್ಟಿದೆ. ಇಷ್ಟು ದಿನ ಜೀವಭಯದಲ್ಲೇ ಹೆದ್ದಾರಿ ದಾಟುತ್ತಿದ್ದ ನಾಗರಿಕರು ನಿಟ್ಟುಸಿರು ಬಿಟ್ಟಂತಾಗಿದೆ.
ಅಪಘಾತ ತಪ್ಪಿಸಲು ಯೋಜನೆ
ದಶಪಥ ದಾಟುವಾಗ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದ ಕಾರಣ ಹೆದ್ದಾರಿ ಪ್ರಾಧಿಕಾರವು ಕೋತಿ ಆಂಜನೇಯಸ್ವಾಮಿ ದೇಗುಲದ ಬಳಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿ ಜಾಗ ಪರಿಶೀಲಿಸಿ, ಕಾಮಗಾರಿಗೆ ಟೆಂಡರ್ ಕರೆದಿತ್ತು. ಟೆಂಡರ್ ಪಡೆದ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿ, ಶೇ.80 ಕಾಮಗಾರಿ ಮುಗಿಸಿ, ಕಬ್ಬಿಣದ ಬೀಮ್ ಹಾಕಿ, ನಡೆದಾಡಲು ಗೇಜ್ ಅಳವಡಿಸಿದ್ದರು. ಜನ ಮೇಲಕ್ಕೆ ಹತ್ತಿ ಇಳಿಯಲು ಮೆಟ್ಟಿಲುಗಳನ್ನಷ್ಟೇ ಜೋಡಣೆ ಮಾಡಬೇಕಿತ್ತು. ಇದೇ ವೇಳೆ ವಿವಾದ ನ್ಯಾಯಾಲಯ ಮೆಟ್ಟಿಲೇರಿತ್ತು.
ಆರಂಭದಿಂದಲೂ ಎದುರಾದ ವಿಘ್ನ ಮೇಲ್ಸೇತುವೆ ನಿರ್ಮಾಣಕ್ಕೆ ಜಾಗದ ಸಮಸ್ಯೆ ಉಂಟಾಗಿ ಕಳೆದ 2 ವರ್ಷಗಳಿಂದ ಕಾಮಗಾರಿಗೆ ಚಾಲನೆ ಸಿಕ್ಕಿರಲಿಲ್ಲ. ಶಾಸಕ ಎಚ್.ಸಿ.ಬಾಲಕೃಷ್ಣ ಗೊಂದಲ ನಿವಾರಣೆಗೆ ಮಧ್ಯೆ ಪ್ರವೇಶಿಸಿ, ಉದ್ದೇಶಿತ ಯೋಜನೆಗೆ ಸೂಕ್ತ ಜಾಗ ಹುಡುಕುವ ಸಂಬಂಧ ಅಧಿಕಾರಿಗಳು ಹಾಗೂ ಸ್ಥಳಿಯ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿ, ಅಂತಿಮವಾಗಿ ದೇವಾಲಯದ ಪಕ್ಕದಲ್ಲಿಯೇ ಸ್ಕೆ$ ವಾಕ್ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಟೆಂಡರ್ದಾರರು ಕಾಮಗಾರಿ ಆರಂಭಿಸುವಾಗ ಯಾವುದೇ ಪತ್ರ ವ್ಯವಹಾರ ನಡೆಸಿಲ್ಲ, ದೇವಾಲಯದ ಜಾಗವನ್ನು ಏಕಾಏಕಿ ಅತಿಕ್ರಮಣ ಮಾಡಲಾಗುತ್ತಿದೆ. ಯಾವುದೇ ಪರಿಹಾರ ಕೊಟ್ಟಿಲ್ಲ ಎಂದು ದೇವಾಲಯ ಅಭಿವೃದ್ಧಿ ಟ್ರಸ್ಟಿಗಳು ಆೇಪ ವ್ಯಕ್ತಪಡಿಸಿ, ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಕಾಮಗಾರಿ ನಿಲ್ಲಿಸುವಂತೆ ಆದೇಶಿಸಿದಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಗದ ಸರ್ವೇ ಮಾಡಿಸಿ, ದೇವಾಲಯದ ಜಾಗ ಒತ್ತುವರಿ ಆಗಿದ್ದರೆ ಪರಿಹಾರ ನೀಡುವುದಾಗಿ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಒಪ್ಪದ ದೇವಾಲಯದ ಟ್ರಸ್ಟಿಗಳು ಪರಿಹಾರದ ಬೇಡ, ಪ್ರಾಧಿಕಾರ ಸ್ಕೈವಾಕ್ ನಿರ್ಮಿಸುತ್ತಿರುವ ಸ್ಥಳವೇ ಸರಿಯಿಲ್ಲ. ಅಲ್ಲಿ ಸಾರ್ವಜನಿಕರ ಓಡಾಟ ಕಡಿಮೆ. ಸಾರ್ವಜನಿಕ ಓಡಾಟ ಎಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಸ್ಕೈ ವಾಕ್ ನಿರ್ಮಿಸಲಿ ಎಂದಿದ್ದರು.
ಕೋತಿ ಆಂಜನೇಯ ಸ್ವಾಮಿ ದೇವಸ್ಥಾನದ ಜಾಗದಲ್ಲಿ ಅರಳಿ ಮರ ಕಡೆದು ಅರಳಿ ಕಟ್ಟೆಗೆ ಹಾನಿ ಮಾಡಿ ದುರದ್ದೇಶದಿಂದ ಸ್ಕೈವಾಕ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಕಾಮಗಾರಿಗೆ ತಡೆ ನೀಡಿದಾಗ ವಿಚಾರಣೆ ವೇಳೆ ಪ್ರಾಧಿಕಾರದ ಅಧಿಕಾರಿಗಳು ಪರಿಹಾರ ನೀಡುತ್ತೇವೆ ಎಂದರು. ಇದಕ್ಕೆ ನಾವು ಒಪ್ಪಿಲ್ಲ. ಸಾರ್ವಜನಿಕರಿಗೆ ಅನುಕೂಲವಾಗುವ ಜಾಗದಲ್ಲಿ ಸ್ಕೆ$ವಾಕ್ ನಿರ್ಮಿಸಲಿ ಎಂದು ಮನವಿ ಮಾಡಿದ್ದೇವೆ. ಹೀಗಿದ್ದರೂ ಹೆದ್ದಾರಿ ಪ್ರಾಧಿಕಾರವು ರಾತ್ರಿ ವೇಳೆ ಕಾಮಗಾರಿ ಮಾಡಿ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ. > ತಿಮ್ಮೇಗೌಡ ದೇವಸ್ಥಾನದ ಟ್ರಸ್ಟಿ
10&ಬಿಜಿಡಿ&1 ಬಿಡದಿಯ ಕೋತಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಿರ್ಮಾಣವಾಗಿರುವ ಸ್ಕೆ$ವಾಕ್.