ಮಡಿಕೇರಿ:
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಮಡಿಕೇರಿಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಪ್ರಥಮ ಬಾರಿಗೆ ಭಾಗವಹಿಸಿದ್ದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೊಡಗಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ಕೊಡಗಿನಲ್ಲಿ ಪ್ರಕೃತಿಗೆ ಪೂರಕ ಸುಸ್ಥಿರ ಅಭಿವೃದ್ಧಿ ತನ್ನ ಚಿಂತನೆಯಾಗಿದೆ ಎಂದು ಹೇಳಿಕೊಂಡಿದ್ದ ಅವರು, ಬಾಲ್ಯದಿಂದಲೂ ಜಿಲ್ಲೆಯ ಜತೆಗೆ ಭಾವನಾತ್ಮಕ ನಂಟು ಇದ್ದು, ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ, ನಾಗರಹೊಳೆ, ಕುಟ್ಟ, ಶ್ರೀಮಂಗಲ ಭಾಗಕ್ಕೆ ಆಗಾಗ್ಗೆ ಭೇಟಿ ಕೊಡುತ್ತಿದ್ದೆ. ಇಲ್ಲಿಯ ಪ್ರಕೃತಿ, ವನ್ಯಜೀವಿ ಸಂಪತ್ತು ತುಂಬಾ ಇಷ್ಟ. ಕೊಡಗು ಕೊಡಗಾಗಿಯೇ ಉಳಿಯಬೇಕು ಎನ್ನುವುದು ತನ್ನ ಕಾಳಜಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಕೊಡಗಿನ ಸಂಸ್ಕೃತಿ, ಪರಂಪರೆ, ಪರಿಸರ, ವನ್ಯಜೀವಿ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಮಾತಿಗಿಂತ ಕೆಲಸ ಮುಖ್ಯ ಎನ್ನುವಂತೆ ನಡೆದುಕೊಳ್ಳಲಾಗುವುದು ಎಂದಿದ್ದರು. ಈ ಮೂಲಕ ತಮ್ಮ ಚೊಚ್ಚಲ ಭಾಷಣದಲ್ಲೇ ಕೊಡಗಿನ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದರು.
ಇದೀಗ ಚುನಾವಣೆ ಮುಗಿದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಯದುವೀರ್ ಆಯ್ಕೆ ಆಗಿದ್ದಾರೆ. ಕೊಡಗಿನ ಬಗ್ಗೆ ಕಾಳಜಿಯ ಮಾತುಗಳಿಂದ ಗಮನ ಸೆಳೆದಿದ್ದ ಅವರ ಮೇಲೆ ಜಿಲ್ಲೆಯ ಜನತೆ ಈಗ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಪ್ರಮುಖವಾಗಿ ರೈಲ್ವೇ ಸಂರ್ಪದ ಇಲ್ಲದ ದೇಶದ ಏಕೈಕ ಜಿಲ್ಲೆ ಎನ್ನುವ ಹಣೆಪಟ್ಟಿಯಿಂದ ಕೊಡಗನ್ನು ಪಾರು ಮಾಡುವ ಜವಾಬ್ದಾರಿ ನೂತನ ಸಂಸದರ ಮೇಲಿದೆ. ಈ ಹಿಂದಿನ ಸಂಸದರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರೂ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ತಮ್ಮ ಅವಧಿಯಲ್ಲಾದರೂ ಕೊಡಗಿಗೆ ರೈಲು ತರುವಲ್ಲಿ ಯದುವೀರ್ ಸಫಲರಾಗಬಹುದು ಎನ್ನುವ ನಿರೀಕ್ಷೆ ಇದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಕನಸಿನ ಕೂಸು ಎಂದೇ ಬಿಂಬಿಸಲಾಗಿರುವ ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳು ಬಹುತೇಕ ಮುಗಿದಿದ್ದು, ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ೨೦೨೪ರ ಅಂತ್ಯಕ್ಕೆ ಈ ಹೆದ್ದಾರಿ ಸಂಚಾರಕ್ಕೆ ಲಭ್ಯವಾಗುವುದಾಗಿ ಪ್ರತಾಪ್ ಸಿಂಹ ಹೇಳಿದ್ದರು. ಈ ನಿಟ್ಟಿನಲ್ಲಿ ಸಂಸದ ಯದುವೀರ್ ತಮ್ಮ ಪ್ರಯತ್ನ ಮುಂದುವರಿಸಿ ನಿಗದಿತ ಅವಧಿಯಲ್ಲಿ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೆ ಸಹಕರಿಸುವರು ಎನ್ನುವ ನಿರೀಕ್ಷೆಯನ್ನೂ ಕೊಡಗಿನವರು ಇಟ್ಟುಕೊಂಡಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ಕೊಡಗು ಪ್ರವಾಸೋದ್ಯಮವನ್ನೇ ಉಸಿರಾಡುತ್ತಿದೆ. ಪ್ರಾಕತಿಕ ವಿಕೋಪ, ಕೊರೊನಾ ಕಾಲಘಟ್ಟದ ನಂತರ ಜಿಲ್ಲೆಯ ಪ್ರವಾಸೋದ್ಯಮ ಏರಿಳಿತದ ದಾರಿಯಲ್ಲಿದೆ. ಪ್ರವಾಸೋದ್ಯಮ ಬೆಳೆಸಲು ವಿಶಾಲ ಅವಕಾಶಗಳಿದ್ದರೂ ಇದರ ಸದುಪಯೋಗ ಆಗುತ್ತಿಲ್ಲ. ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಖಾಸಗಿಯಾಗಿ ಕೆಲವು ಪ್ರಯತ್ನಗಳು ನಡೆಯುತ್ತಿದ್ದರೂ ಸರ್ಕಾರದ ಕಡೆಯಿಂದ ವಿಶೇಷ ಯೋಜನೆಗಳು ಬರುತ್ತಿಲ್ಲ. ಪ್ರವಾಸೋದ್ಯಮ ಎಂದರೆ ಪರಿಸರ ನಾಶ ಎನ್ನುವ ಮನೋಭಾವವೂ ಬೇರೂರಿದೆ. ಇದೆಲ್ಲದಕ್ಕೂ ಕಡಿವಾಣ ಹಾಕಲು ಸುಸ್ಥಿರ ಪ್ರವಾಸೋದ್ಯಮ ಬೆಳೆಸುವ ಅಗತ್ಯವಿದೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೂ ಸ್ಥಿರ ಮಾರುಕಟ್ಟೆ ಒದಗಿಸುವ ಅಗತ್ಯವಿದೆ. ಬೆಲೆ ಏರಿಳಿತ, ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ ಕಾಫಿ ಬೆಳೆಗಾರರು ಇಂದು ಸಂಕಷ್ಟದಲ್ಲಿದ್ದಾರೆ. ಸಂಸದ ಯದುವೀರ್ ಅವರು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎನ್ನುವ ನಿರೀಕ್ಷೆಯೂ ಜಿಲ್ಲೆಯ ಜನತೆಯಲ್ಲಿ ಇದೆ. ಇದನ್ನು ಹೊರತುಪಡಿಸಿ ನೂತನ ಸಂಸದರಿಂದ ಕೊಡಗಿನವರು ಏನು ಬಯಸುತ್ತಾರೆ ಎನ್ನುವುದರ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೈಲು ವ್ಯವಸ್ಥೆ ಕಲ್ಪಿಸುವುದಾಗಿ ಕಳೆದ ಹತ್ತು ವ?ರ್ಗಳಿಂದ ಹೇಳಿಕೆ ನೀಡುತ್ತಾ ಬಂದಿದ್ದು ಇನ್ನೂ ಯಾವುದೇ ಬೆಳವಣಿಗೆಗಳಾಗಿಲ್ಲ. ಕೂಡಲೇ ಈ ಕಾರ್ಯಕ್ಕೆ ಚಾಲನೆ ನೀಡಬೇಕು. ಜಿಲ್ಲೆಯಲ್ಲಿ ಕಾರ್ಮಿಕರು ನಿವೇಶನ ವಂಚಿತರಾಗಿದ್ದು ಕೇಂದ್ರ ಸರ್ಕಾರದ ವಸತಿ ಯೋಜನೆಯಡಿ ನಿವೇಶನದೊಂದಿಗೆ ಮನೆ ನಿರ್ಮಾಣ ಮಾಡಿ ಕೊಡಬೇಕು
ಮಹದೇವ್, ಕಾರ್ಮಿಕ ಮುಖಂಡ, ಸಿಐಟಿಯು
ಕೊಡಗು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳು ಇವೆ. ಸಂಸದರು ಕೊಡಗನ್ನು ವಿಶೇ?ವಾಗಿ ಪರಿಗಣಿಸಬೇಕು. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ವನ್ಯಜೀವಿಗಳ ಹಾವಳಿ ಮಿತಿಮೀರುತ್ತಿದೆ. ಅವುಗಳ ತಡೆಗೆ ಶಾಶ್ವತ ಪರಿಹಾರ ಆಗಬೇಕು. ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವತ್ತ ಗಮನ ಹರಿಸಬೇಕು.
ಜಯಪ್ರಕಾಶ್ ಮೂಲೆಮನೆ, ಉದ್ಯಮಿ, ಗೋಣಿಕೊಪ್ಪ
ನೂತನ ಸಂಸದ ಯದುವೀರ್ ಒಡೆಯರ್ ಮೇಲೆ ಸಾಕ?್ಟು ನಿರೀಕ್ಷೆಯಿದೆ. ಕೊಡಗು ಜಿಲ್ಲೆಯಲ್ಲಿ ಹೆಬ್ಬಾಲೆ ಗ್ರಾಮ ಅತ್ಯಂತ ದೊಡ್ಡ ಗ್ರಾಮ. ಈ ಭಾಗದಲ್ಲಿ ರೈತರು ಹೆಚ್ಚಾಗಿರುವ ಕಾರಣ ಇಲ್ಲಿ ಕೃಷಿ ಕಾಲೇಜು ಸ್ಥಾಪನೆ ಮಾಡಬೇಕಿದೆ. ಹೈನುಗಾರಿಕೆ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನದ ಪಶು ವೈದ್ಯಕೀಯ ಚಿಕಿತ್ಸಾಲಯ ಬೇಕಿದೆ. ಹೆಬ್ಬಾಲೆ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಬೇಕು. ಅದರ ಮೂಲಕ ಅಭಿವೃದ್ಧಿಗೊಳಿಸಬೇಕಿದೆ.
ಅರುಣಕುಮಾರಿ, ಅಧ್ಯಕ್ಷೆ, ಗ್ರಾ.ಪಂ., ಹೆಬ್ಬಾಲೆ
ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಪ್ರಾಕೃತಿಕ ಸೌಂದರ್ಯವನ್ನು ಹಾಳು ಮಾಡದೆ ಅಭಿವೃದ್ಧಿ ಪಡಿಸಿದರೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯಬಹುದು. ಹಲವು ವ?ರ್ಗಳಿಂದ ಕೊಡಗಿಗೆ ರೈಲು ಬರದಿರುವುದರಿಂದ ನೂತನ ಸಂಸದರು ಅದ್ಯತೆ ನೀಡಿ ಅಭಿವೃದ್ಧಿ ಚಿಂತನೆ ನಡೆಸಬೇಕಿದೆ.
ಹೆಚ್.ಪಿ. ಮಂಜುನಾಥ್, ಮಾಜಿ ಅಧ್ಯಕ್ಷ, ಗ್ರಾ.ಪಂ. ಹೆಬ್ಬಾಲೆ
ಸರ್ಕಾರದ ಬಹುತೇಕ ಯೋಜನೆಗಳು ಎ?್ಟೋ ಗ್ರಾಮಗಳಿಗೆ ತಲುಪುವಲ್ಲಿ ಇನ್ನೂ ವಿಫಲವಾಗಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಮನೆ ಮನೆಗೆ ವಿದ್ಯುತ್, ಶೌಚಾಲಯಗಳ ನಿರ್ಮಾಣ, ಗ್ರಾಮೀಣ ಪ್ರದೇಶದ ರಸ್ತೆಗಳು ಇನ್ನಿತರ ಹಲವು ಯೋಜನೆಗಳು ಗ್ರಾಮಗಳಿಗೆ ತಲುಪಲು ಸಾಧ್ಯವಾಗದಿರುವುದು ವಿಪರ್ಯಾಸ. ಯುವಜನತೆಗೆ ಉದ್ಯೋಗ ನೀಡುವಲ್ಲಿ ಹೆಚ್ಚಿನ ಮಹತ್ವ ನೀಡುವುದು, ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸುವುದು, ವೈದ್ಯಕೀಯ ಸವಲತ್ತುಗಳು ಉತ್ತೇಜಿಸುವಲ್ಲಿ ಪಾತ್ರವಹಿಸುವಂತಾಗಲಿ.
ದಿಲೀಶ್ ನಾಯರ್, ಕಾರ್ಮಿಕ, ನಾಪೋಕ್ಲು
ನೂತನ ಸಂಸದರು ಉತ್ತಮ, ಜನಪರ ಕೆಲಸ ಮಾಡುವ ನಿರೀಕ್ಷೆ ಇದೆ. ಹಳ್ಳಿ, ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿ, ಗ್ರಾಮೀಣ ಪ್ರದೇಶದ ಜನರ ದೂರ ಸಂಪರ್ಕ ಬೇಡಿಕೆ ಈಡೇರಿಕೆಗೆ ಒತ್ತು, ಸಾವಯವ ಕೃಷಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡುವುದು, ದಿನ ಬಳಕೆಯ ವಸ್ತುಗಳ ಬೆಲೆ ಇಳಿಕೆ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ದೀಪ ಅಳವಡಿಕೆ ಈ ಅವಧಿಯಲ್ಲಿ ಆಗಲಿ.
ಸೂರ್ಯಕುಮಾರ್, ಮಾಜಿ ಸೈನಿಕ, ಕಲ್ಲುಮೊಟ್ಟೆ, ನಾಪೋಕ್ಲು
ಕುಶಾಲನಗರದವರೆಗೆ ರೈಲ್ಚೇ ಯೋಜನೆ ಪೂರ್ಣಗೊಳಿಸಬೇಕು, ವೈದ್ಯಕೀಯ ಸೇವೆ ಕೊಡಗಿಗೆ ಮತ್ತ?್ಟು ವಿಸ್ತರಿಸಬೇಕು. ಕೊಡಗಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಮೈಸೂರಿಗೆ ಇರುವ ಪಾರಂಪರಿಕ ಹಿನ್ನೆಲೆ ಹಾಗೇ ಉಳಿಯುವಂತಾಗಬೇಕು.
ಅಶೋಕ್ ಟಿ.ಪಿ., ಶನಿವಾರಸಂತೆ
ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಗಬೇಕು. ಇದರಿಂದ ಪಿಯುಸಿ ನಂತರ ಬೇರೆ ಜಿಲ್ಲೆಗಳಿಗೆ ಹೋಗುವುದು ತಪ್ಪುತ್ತದೆ. ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆ. ರಸ್ತೆ ಸಂಪರ್ಕ ಸಮಸ್ಯೆ ಸುಧಾರಿಸಬೇಕಿದೆ. ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರಿಕ್ಷೆ ಎದುರಿಸಲು ಸೂಕ್ತ ವೇದಿಕೆ ಒದಗಿಸಬೇಕು. ಪ್ರವಾಸೋದ್ಯಮ ಉತ್ತಮಪಡಿಸಬೇಕು.
ಕೋಮಲ, ಶಿಕ್ಷಕಿ, ಶನಿವಾರಸಂತೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ ನೂತನ ಸಂಸದರು ಮುಂದಿನ ಐದು ವ?ರ್ಗಳಲ್ಲಿ ಪಕ್ಷ ಭೇದ ಮರೆತು ತಮ್ಮ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಹೆಚ್ಚಿನ ಆದ್ಯತೆ ತೋರಬೇಕು. ೨ ಜಿಲ್ಲೆಗೂ ಸಮಾನವಾದ ಪ್ರಾತಿನಿಧ್ಯ ನೀಡಿ ಕ್ಷೇತ್ರದ ಜನರ ಸಮಸ್ಯೆ ಅರಿತು ಮೂಲ ಸೌಕರ್ಯ ಸಿಗುವಂತೆ ನೋಡಿಕೊಳ್ಳಬೇಕು. ಪ್ರವಾಸೋದ್ಯಮ, ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸಬೇಕು. ಮಳೆಗಾಲದಲ್ಲಿ ಕೊಡಗಿನಲ್ಲಿ ಆಗುವ ಸಮಸ್ಯೆ ಹಾಗೂ ರೈತರ ಸಮಸ್ಯೆಗಳನ್ನು ಅರಿತು ಅದನ್ನು ನಿವಾರಿಸಬಹುದು.
ಅಕ್ಷಿತಾ ನಾಯಕ್ ಟಿ., ರಾಜ್ಯಶಾಸ್ತ್ರ ಉಪನ್ಯಾಸಕಿ, ಕಾವೇರಿ ಕಾಲೇಜು, ವಿರಾಜಪೇಟೆ
ಶಿಕ್ಷಣ, ಅರೋಗ್ಯ, ಕೃಷಿಗೆ ಹೆಚ್ಚಿನ ಅನುದಾನ ತರಲು ಸಂಸದರು ಪ್ರಯತ್ನ ಮಾಡಬೇಕು. ಮಡಿಕೇರಿಯಲ್ಲಿ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆ ಆಗಬೇಕು. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ತುರ್ತು ಚಿಕಿತ್ಸೆ, ಸರ್ಜರಿಗಳು ಇಲ್ಲಿಯೇ ನಡೆಯುವಂತಾಗಬೆಕು. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಕೊಡಗಿನ ಗಡಿ ತನಕ ರೈಲ್ವೇ ಯೋಜನೆ ಪ್ರಾರಂಭವಾಗಬೇಕು.