ಜಿಲ್ಲೆ

ಮಂಡ್ಯ ಜಿಲ್ಲೆಯಲ್ಲಿ ನಾಲ್ಕು ದಿನ ತುಂತುರು ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಡಿ.9ರಿಂದ 13ರವರೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

9ರಂದು 21 ಮಿ.ಮೀ, 10ರಂದು 24 ಮಿ.ಮೀ, 12ರಂದು 4 ಮಿ.ಮೀ ಮಳೆಯಾಗಬಹುದು. ಈ ಐದು ದಿನದ ಅವಧಿಯಲ್ಲಿ ಗರಿಷ್ಠ 29 ರಿಂದ 30 ಹಾಗೂ ಕನಿಷ್ಠ 17 ರಿಂದ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಗಾಳಿ ಪ್ರತಿ ಗಂಟೆಗೆ 11 ರಿಂದ 12 ಕಿ.ಮೀ ವೇಗದಲ್ಲಿ ಬೀಸಬಹುದೆಂದು ತಿಳಿಸಿದ್ದಾರೆ.