ಮಂಡ್ಯ: ಜಿಲ್ಲೆಯಲ್ಲಿ ನ.20 ಹಾಗೂ 21ರಂದು ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
20ರಂದು 4 ಮಿ.ಮೀ ಹಾಗೂ 21ರಂದು 3 ಮಿ.ಮೀ ಮಳೆಯಾಗಬಹುದು. ಅಂತೆಯೇ ನ.18ರಿಂದ 22ರವರೆಗೆ ಜಿಲ್ಲೆಯಲ್ಲಿ ಗರಿಷ್ಟ 30 ರಿಂದ 31 ಹಾಗೂ ಕನಿಷ್ಟ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಈ ಅವಧಿಯಲ್ಲಿ ಗಾಳಿಯು ಪ್ರತಿ ಗಂಟೆಗೆ 2 ರಿಂದ 4 ಕಿ.ಮೀ ವೇಗದಲ್ಲಿ ಬೀಸಬಹುದು ಎಂದು ವರದಿಯಲ್ಲಿ ತಿಳಿಸಿದೆ.