ಮಂಡ್ಯ: ಜಿಲ್ಲೆಯಲ್ಲಿ ಜೂ.13ರಿಂದ 16ರವರೆಗೆ ತುಂತುರುವಿನಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ತಿಳಿಸಿದೆ.
13ರಂದು 10 ಮಿ.ಮೀ, 14ರಂದು 8 ಮಿ.ಮೀ, 15ರಂದು 4 ಮಿ.ಮೀ, 16ರಂದು 3 ಮಿ.ಮೀ ಮಳೆಯಾಗಬಹುದು. ಈ ಅವಧಿಯಲ್ಲಿ ಗರಿಷ್ಟ 28 ರಿಂದ 30 ಡಿಗ್ರಿ ಹಾಗೂ ಕನಿಷ್ಟ 17.3 ರಿಂದ 18.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಅಂತೆಯೇ ಗಾಳಿ ಪ್ರತಿ ಗಂಟೆಗೆ 14 ರಿಂದ 22 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.