Transparent umbrella under heavy rain against water drops splash background. Rainy weather concept. 
ಜಿಲ್ಲೆ

ಜಿಲ್ಲೆಯಲ್ಲಿ ಐದು ದಿನ ಉತ್ತಮ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಕೆಲವು ಸ್ಥಳದಲ್ಲಿ ಮೇ.10ರಿಂದ 14ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ತಿಳಿಸಿದೆ.
10ರಂದು 16 ಮಿ.ಮೀ, 11ರಂದು 6 ಮಿ.ಮೀ, 12ರಂದು 6 ಮಿ.ಮೀ, 13ರಂದು 15 ಮಿ.ಮೀ, 14ರಂದು 6 ಮಿ.ಮೀ ಮಳೆಯಾಗಬಹುದು. ಈ ಅವಧಿಯಲ್ಲಿ ಗರಿಷ್ಟ 35.3 ರಿಂದ 36.5 ಡಿಗ್ರಿ ಹಾಗೂ ಕನಿಷ್ಟ 21.1 ರಿಂದ 22.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಅಂತೆಯೇ ಪ್ರತಿ ಗಂಟೆಗೆ 8 ರಿಂದ 10 ಕಿ.ಮೀ ವೇದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.
ಇನ್ನು ಬುಧವಾರ ಜಿಲ್ಲೆಯಲ್ಲಿ 7.3 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 4.5 ಮಿ.ಮೀ, ಮದ್ದೂರಿನಲ್ಲಿ 5.7 ಮಿ.ಮೀ, ಮಳವಳ್ಳಿಯಲ್ಲಿ 2.7, ಮಂಡ್ಯದಲ್ಲಿ 8.7, ನಾಗಮಂಗಲದಲ್ಲಿ 1.1, ಪಾಂಡವಪುರದಲ್ಲಿ 25.6 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 14.9 ಮಿ.ಮೀ ಮಳೆಯಾಗಿದೆ.