ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ -ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ.
ಈ ಮೊದಲು ರಾಮೇಶ್ವರಂವರೆಗೆ ಸಂಚರಿಸುತ್ತಿದ್ದ ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ವೀಕ್ಲಿ ಎಕ್ಸ್ಪ್ರೆಸ್ ರೈಲು, ಈಗ ರಾಮನಾಥಪುರಂವರೆಗೂ ಸಂಚರಿಸಲಿದೆ. ಈ ಪರಿಷ್ಕೃತ ಸಂಚಾರ ಜುಲೈ 5 ರಿಂದ 26ರವರೆಗೆ ಜಾರಿಯಲ್ಲಿರುತ್ತದೆ.
ರಾಮೇಶ್ವರಂ ಬದಲು ರಾಮನಾಥಪುರನಿಂದ ಎಸ್ಎಸ್ಎಸ್ ಹುಬ್ಬಳ್ಳಿವರೆಗೆ ಸಂಚರಿಸುವ ವೀಕ್ಲಿ ಎಕ್ಸ್ಪ್ರೆಸ್ ರೈಲು ಸೇವೆ ಜುಲೈ 6 ರಿಂದ 27ರವರೆಗೆ ಜಾರಿಯಲ್ಲಿರುತ್ತದೆ.
ಪ್ರತಿ ಶನಿವಾರ ಬೆಳಗ್ಗೆ 6.50ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ರಾಮನಾಥಪುರಂ ತಲುಪಲಿದೆ.
ಪ್ರತಿ ಭಾನುವಾರ ರಾತ್ರಿ 10 ಗಂಟೆಗೆ ರಾಮನಾಥಪುರಂನಿಂದ ಹೊರಡುವ ರೈಲು, ಮಾರನೇ ದಿನ ರಾತ್ರಿ 7.40ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.