ಕಾರವಾರ: ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 31 ಜನರನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ ಕುಮಾರ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಗೂಂಡಾ ಕಾಯ್ದೆಯಲ್ಲಿ ಹೆಸರಿರುವವರು, ಕೋಮು ಸಂಘರ್ಷ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಅಂಥವರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು.
33 ಜನರ ಪಟ್ಟಿ ಮಾಡಿ ವಿಚಾರಣೆ ನಡೆಸಲಾಗಿತ್ತು. ಅದರಲ್ಲಿ ಇಬ್ಬರ ಹೆಸರು ಕೈಬಿಟ್ಟು 31 ಜನರನ್ನು ಗಡಿಪಾರು ಮಾಡಲು ಜಿಲ್ಲಾಽಕಾರಿಗಳು ಶೀಘ್ರ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದರು.
ಚುನಾವಣೆಯ ಸಂದರ್ಭಲ್ಲಿ ಕಾನೂನು ಸುವ್ಯವಸ್ಥೆ ಕಾಪಾಟುವ ಸಲುವಾಗಿ ನಾಲ್ಕು ಸಿಆರ್‌ಪಿಎಫ್ ತುಕಡಿಗಳು ಜಿಲ್ಲೆಗೆ ಆಗಮಿಸಿವೆ.
ಪ್ರತಿ ತುಕಡಿಯಲ್ಲಿ 80 ರಿಂದ 90 ಸಶಸ್ತç ಸಿಬ್ಬಂದಿ ಇರಲಿದ್ದಾರೆ.
ಶಿರಸಿ, ಹಳಿಯಾಳ, ಭಟ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಈ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಪ್ರತಿ ಚೆಕ್ ಪೋಸ್ಟ್ಗೆ ಸಶಸ್ತç ದಳ ನಿಯೋಜನೆ ನಡೆಯಲಿದೆ. ಅಲ್ಲದೆ, 280 ಅತಿ ಸೂಕ್ಷ್ಮ ಮತಗಟ್ಟೆಗಳಿಗೂ ಇವರನ್ನು ನಿಯೋಜಿಸಲಾಗುವುದು.
ಕಂದಾಯ, ಅಬಕಾರಿ ಹಾಗೂ ಇತರ ಇಲಾಖೆಗಳ ಜತೆ ಸೇರಿ ಪೊಲೀಸ್ ಸಿಬ್ಬಂದಿ ಈಗಾಗಲೇ ಅಕ್ರಮ ತಡೆಯಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಐಡಿಗಳನ್ನು ಹೊಂದಿ ಸಮಾಜದ ಶಾಂತಿ ಕದಡುವವರ ವಿರುದ್ಧ ಯಾರಾದರೂ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದರು. ಐಜಿಪಿ ಚಂದ್ರ ಗುಪ್ತ, ಎಸ್‌ಪಿ.ಎನ್. ವಿಷ್ಣುವರ್ಧನ ಇದ್ದರು.