ಜಿಲ್ಲೆ

ಔಷಧೀಯ ಸಸ್ಯಗಳ ಪ್ರದರ್ಶನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ: ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಫೆ.18ರಂದು ಬೆಳಗ್ಗೆ 11ಗಂಟೆಗೆ ಔಷಧೀಯ ಸಸ್ಯಗಳ ಪ್ರದರ್ಶನ ಮತ್ತು ಉಪನ್ಯಾಸ ಏರ್ಪಡಿಸಲಾಗಿದೆ. ಪ್ರೋಬಸ್ ಕ್ಲಬ್, ಸಾಂಸ್ಕೃತಿಕ ಸಮುದಾಯ ಸಂಘ ಮತ್ತು ಶ್ರೀ ಕಟ್ಟಿ ಮಂಗಳಾದೇವಿ ಮಹಿಳಾ ಮಂಡಳದ ಸಹಯೋಗದಲ್ಲಿ ಆಯೋಜಿಸಲಾಗಿದೆ.

ದೋಣಿ-ಗದಗ ಕಪ್ಪತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಂಸ್ಕೃತಿಕ ಸಮುದಾಯ ಸಂಘದ ಅಧ್ಯಕ್ಷ ಡಾ. ಜಿ.ಬಿ. ಕಲಕೋಟಿ ಅಧ್ಯಕ್ಷತೆ ವಹಿಸುವರು.

ಪ್ರೋಬಸ್ ಕ್ಲಬ್ ಅಧ್ಯಕ್ಷ ಬಸವರಾಜ ಕೋಟಿ, ಶ್ರೀ ಕಟ್ಟಿ ಮಂಗಳಾ ದೇವಿ ಮಹಿಳಾ ಮಂಡಳದ ಅಧ್ಯಕ್ಷೆ ರೇಶ್ಮಾ ವೈಚಾಳ, ರಾಮದುರ್ಗದ ದಾಕ್ಷಾಯಣಿ ಜಾಬಶೆಟ್ಟಿ ಫೌಂಡೇಷನ್​ನ ಅಧ್ಯಕ್ಷ ಬಾಲಚಂದ್ರ ಜಾಬಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಸ್ಯಶಾಸ್ತ್ರ ಪರಿಣತರಾದ ಡಾ. ಬಿ.ಡಿ ಹುದ್ದಾರ, ಪ್ರಕಾಶ ಸಿದ್ದನಗೌಡರ, ಪ್ರೊ. ರವೀಂದ್ರ ಕರಡಿ ಅವರು ಔಷಧೀಯ ಸಸ್ಯಗಳ ಪ್ರದರ್ಶಿಸಿ, ಸಾರ್ವಜನಿಕರಿಗೆ ಅವುಗಳ ಉಪಯೋಗಗಳನ್ನು ತಿಳಿಸಲಿದ್ದಾರೆ.