ಹಾಸನ: ನಗರದ ವಿದ್ಯಾಸೌಧ ಪದವಿಪೂರ್ವ ಕಾಲೇಜಿನಲ್ಲಿ ಇನ್ಸ್ಪಿರಾಕ್ಸ್ ಶೀರ್ಷಿಕೆ ಅಡಿಯಲ್ಲಿ ಮಂಗಳವಾರ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾಸೌಧ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮಂಜೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ವಸ್ತು ಪ್ರದರ್ಶನ ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಶಂಶಿಸಿದರು. ನಿರ್ದೇಶಕ ಪವನ್ ಮಂಜೇಗೌಡ ಹಾಗೂ ಪ್ರಾಂಶುಪಾಲ ಸಿದ್ದರಾಮಯ್ಯ ಇದ್ದರು. ಹೊಳೆನರಸೀಪುರದ ಋಷಿಶ್ರೀ ವಿದ್ಯಾನಿಕೇತನ್, ವಿಜಯನಗರದ ವಿದ್ಯಾಸೌಧ ಮತ್ತು ಕೆಐಎಡಿಬಿ ಶಾಲೆಯ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ವೀಕ್ಷಿಸಿದರು.