ರೋಣ: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರಜೆಗಳೆ ಪ್ರಭುಗಳಾಗಿ ಬದುಕಲು ಸಂವಿಧಾನವು ಪ್ರತಿಯೊಬ್ಬರಿಗೂ ಕರ್ತವ್ಯಗಳನ್ನು ಮತ್ತು ಹಕ್ಕುಗಳನ್ನು ನೀಡಿದೆ. ಆದರೆ, ನಾವು ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳನ್ನು ಮಾತ್ರ ಚಲಾಯಿಸುತ್ತಿದ್ದೇವೆ. ಪ್ರತಿಯೊಬ್ಬರೂ ಕರ್ತವ್ಯಗಳನ್ನು ಪಾಳಿಸಬೇಕು ಎಂದು ಕೆಸಿಸಿಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ಪಟ್ಟಣದ ವಿ.ಎಫ್. ಪಾಟೀಲ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಂವಿಧಾನವು ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಅವುಗಳ ಮಹತ್ವ ಅರಿತು ಸಂವಿಧಾನಕ್ಕೆ ಗೌರವ ತೋರಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ‘ವಿವಿಧತೆಯಲ್ಲಿ ಏಕತೆ ಸಾರುವ ಮೂಲಕ ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನು ಜಗತ್ತಿಗೆ ಸಾರುತ್ತಿರುವ ಮಾದರಿ ರಾಷ್ಟ್ರ ಭಾರತವಾಗಿದೆ’ ಎಂದರು.
ವಿದ್ಯಾ ದೊಡ್ಡಮನಿ, ಬಸವರಾಜ ಅಂಗಡಿ, ವಾಣಿ ಉಂಕಿ, ಶಿವಾನಂದ ಹರ್ತಿ, ಬಸವರಾಜ ನವಲಗುಂದ, ಸಂಜಯ ದೊಡ್ಡಮನಿ, ಪ್ರಕಾಶ ಹೊಸಳ್ಳಿ, ಮೌನೇಶ ಹಾದಿಮನಿ, ವೀರಪ್ಪ ತೆಗ್ಗಿನಮನಿ, ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಸಂಗು ನವಲಗುಂದ, ಸಂತೋಷ ಕಡಿವಾಲ ಇತರರಿದ್ದರು.