ಶಿರೋಳ: ದಸರಾ ಅಂಗವಾಗಿ ಇತ್ತೀಚೆಗೆ ಬೆಟ್ಟದ ಹುಲಿ ಗೆಳೆಯರ ಬಳಗ ಹಾಗೂ ಲಾಲಸಾಬ್ ಅರಗಂಜಿ ಅಭಿಮಾನಿ ಬಳಗದ ಆಶ್ರಯದಲ್ಲಿ ಮೂರು ದಿನ ಕಾಲ ರಾಜ್ಯ ಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಲಾಲಸಾಬ ಅರಗಂಜಿ ಅಧ್ಯಕ್ಷತೆ ವಹಿಸಿದ್ದರು. ಅಭಿನವ ಯಚ್ಚರಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರೇಮಠದ ಅಪ್ಪಯ್ಯ ಶಾಸ್ತ್ರಿಗಳು, ಬೆಳಗಾವಿಯ ಪ್ರಭಾವತಿ ಚವಡಿ, ದ್ಯಾಮಣ್ಣ ಕಾಡಪ್ಪನವರ, ಪ್ರಕಾಶ ಸೊಬರದ, ಪ್ರಕಾಶಗೌಡ ತಿರಕನಗೌಡ್ರ, ಹನಮಂತಗೌಡ ತಿರಕನಗೌಡ್ರ, ಶರಣಪ್ಪ ಕಾಡಪ್ಪನವರ, ಪರಸಪ್ಪ ರಾಥೋಡ್, ದ್ಯಾಮಣ್ಣ ತೆಗ್ಗಿ, ಅಕ್ಷಯ ಗಡೆಕಾರ, ರಾಜೇಸಾಬ ಚಳ್ಳಮರದ, ಶರಣಪ್ಪ ಸೂಡಿ ಇದ್ದರು.
ಫಲಿತಾಂಶ: ಹಾಲು ಹಲ್ಲಿನ ಟಗರಿನ ಕಾಳಗದಲ್ಲಿ ಮಣಿಕಂಠ ಹೆಸರಿನ ಟಗರು ಪ್ರಥಮ, ಶ್ರೀರಂಗ ಅಲಿಯಾಸ್ ಡಾಲಿ ದ್ವಿತೀಯ, ಮಣಿಕಂಠ ಶಾಂತಗೇರಿ ತೃತೀಯ ಸ್ಥಾನ ಪಡೆಯಿತು. ಎರಡು ಹಲ್ಲಿನ ಟಗರಿನ ಕಾಳಗದಲ್ಲಿ ನರಗುಂದದ ಕೆಜಿಎಫ್ ಸುಲ್ತಾನ್ ಪ್ರಥಮ, ನರಗುಂದದ ಸರ್ಕಾರ್ ದ್ವಿತೀಯ, ಕಿತ್ತಲಿಯ ಮಾರುತೇಶ್ವರ ತೃತೀಯ ಸ್ಥಾನ ಪಡೆದುಕೊಂಡಿತು, ನಾಲ್ಕು ಹಲ್ಲಿನ ಟಗರಿನ ಕಾಳಗದಲ್ಲಿ ಹುಲಿಗೆಪ್ಪ ಪ್ರಥಮ, ಅಣ್ಣಿಗೇರಿಯ ರೇಣುಕಾದೇವಿ ದ್ವಿತೀಯ, ಶಿರೋಳದ ಲಕ್ಷ್ಮೀದೇವಿ ತೃತೀಯ ಸ್ಥಾನ ಪಡೆದುಕೊಂಡಿತು. ಆರು ಹಲ್ಲಿನ ಟಗರಿನ ಕಾಳಗದಲ್ಲಿ ಹೊನ್ನಳ್ಳಿಯ ರಾಯಣ್ಣ ಪ್ರಥಮ, ಅಣ್ಣಿಗೇರಿಯ ದೊರೆ ದ್ವಿತೀಯ, ಮರಡಿ ಮಾರುತೇಶ್ವರ ತೃತೀಯ ಸ್ಥಾನ ಗೆದ್ದುಕೊಂಡಿತು. ಎಂಟು ಹಲ್ಲಿನ ಕಾಳಗದಲ್ಲಿ 7 ಸ್ಟಾರ್ ಸುಲ್ತಾನ್ ಪ್ರಥಮ, ಹಂಚಿನಾಳದ ಪಂದಳದ ಕಂದ ದ್ವಿತೀಯ, ಕೊಡೇಕಲ್‌ನ ಆರ್ಟಿಜೆ ಗ್ರೂಪ್ ತೃತೀಯ ಹಾಗೂ ಶಿರೋಳದ ಮಣಿಕಂಠ ಚತುರ್ಥ ಸ್ಥಾನ ಪಡೆದುಕೊಂಡಿತು.