ವಿಜಯಪುರ : ೇತ್ರ ಶಿಣಾಧಿಕಾರಿಗಳು ನಗರ ವಲಯದ ಸಹಯೋಗದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನಗೂಳಿ ಅಗಸಿ "ಬ' ವಲಯದ 2025&26 ನೇ ಸಾಲಿನ ವಲಯಮಟ್ಟದ ಕ್ರೀಡಾಕೂಟದ ವಿವಿಧ ಪಂದ್ಯಗಳಲ್ಲಿ ಇಲ್ಲಿನ ವಿವೇಕ ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.
ಬಾಲಕಿಯರು ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಕಬಡ್ಡಿಯಲ್ಲಿ ಪ್ರಥಮ, 100 ಮೀ. ಓಟ ಪ್ರಥಮ, 200 ಮೀ. ಓಟ ಪ್ರಥಮ, ಗುಂಡು ಎಸೆತ ಪ್ರಥಮ, ಬರ್ಚಿ ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಕಬಡ್ಡಿಯಲ್ಲಿ ದ್ವೀತಿಯ ಸ್ಥಾನ, 100 ಮೀ. ಓಟ ಪ್ರಥಮ ಹಾಗೂ ದ್ವೀತಿಯ, 100 ಮೀ. ಓಟದಲ್ಲಿ ದ್ವೀತಿಯ, ಚಕ್ರ ಎಸೆತ ದ್ವೀತಿಯ ಹಾಗೂ ತೃತೀಯ ಸ್ಥಾನ, ಬಲ್ಲೆ ಎಸೆತದಲ್ಲಿ ಪ್ರಥಮ ಹಾಗೂ ದ್ವೀತಿಯ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯ ಸುರೇಶ ದೇಸಾಯಿ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ವಿಜಯಪುರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲೆಯ ದೈಹಿಕ ಐ.ಬಿ. ಪಾಟೀಲ, ಆರ್.ಎಸ್. ಬಿರಾದಾರ, ಸಿದ್ದನಗೌಡ ಬಿರಾದಾರ ಮತ್ತಿತರರಿದ್ದಾರೆ.