ಇಂಡಿ: ತಾಲೂಕುಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಹಿರಿಯರ ವಿಭಾಗದಲ್ಲಿ ಸಾತ್ವಿಕ್ ಪಾಟೀಲ್ ಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ, ಶಿವಾನಿ ಕಾಗೆ ಇಂಗ್ಲಿಷ್ ಕಂಠಪಾಠದಲ್ಲಿ (ಪ್ರಥಮ), ಪ್ರೌಢ ವಿಭಾಗದಲ್ಲಿ ತನು ಅಕಳವಾಡಿ ಪ್ರಬಂಧ ಸ್ಪರ್ಧೆಯಲ್ಲಿ (ಪ್ರಥಮ), ಸಹನಾ ದ್ಯಾಮಗೊಂಡ ಇಂಗ್ಲಿಷ್ ಭಾಷಣದಲ್ಲಿ (ದ್ವೀತಿಯ), ಚಿತ್ರಕಲೆಯಲ್ಲಿ ಜ್ಯೋತಿ ಮೇತ್ರಿ (ದ್ವೀತಿಯ) ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇಂಡಿ ೇತ್ರ ಶಿಣಾಧಿಕಾರಿ ಟಿ.ಎಸ್. ಆಲಗೂರ, ಮುಖ್ಯಶಿಕ್ಷಕ ಎಸ್.ಜಿ ಬನಸೋಡೆ ಹರ್ಷ ವ್ಯಕ್ತಪಡಿಸಿದ್ದಾರೆ.