ಜಿಲ್ಲೆ

ವಿಶೇಷ ಮಕ್ಕಳ ಪಾಲನೆ ದೇವರು ಮೆಚ್ಚುವ ಕಾರ್ಯ : ಸ್ಪೀಕರ್ ಯು.ಟಿ ಖಾದರ್ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಳ್ಯ

ವಿಶೇಷ ಮಕ್ಕಳ ಸೇವೆಗೈಯ್ಯುವುದು, ಅವರಿಗೆ ಶಿಕ್ಷಣ ನೀಡುವುದು ದೇವರು ಮೆಚ್ಚುವ ಕೆಲಸ. ಆ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಸುಳ್ಯದ ಎಂ.ಬಿ.ಫೌಂಡೇಶನ್ ವತಿಯಿಂದ ಸಾಂದೀಪ್ ವಿಶೇಷ ಶಾಲೆ ಸಭಾಂಗಣದಲ್ಲಿ ಬುಧವಾರ ಉತ್ತಮ ಶಿಕ್ಷಕರಿಗೆ ಕೊಡಮಾಡುವ ಎಂ.ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ, ವಿಶೇಷ ಶಾಲೆ ಮುನ್ನಡೆಸುವುದು ಅಸಾಮಾನ್ಯ ಕೆಲಸ. ವಿಶೇಷ ಚೇತನ ಮಕ್ಕಳ ಪ್ರತಿಭೆ ಗುರುತಿಸಿ ಬೆಳೆಸುವುದು ಶ್ಲಾಘನೀಯ ಕಾರ್ಯ ಎಂದರು.

ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ದಕ್ಷಿಣ ಕನ್ನಡ ಮಾಜಿ ಸಂಸದ, ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ.ನೀರಬಿದರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನಪಂ ಸದಸ್ಯೆ ಕಿಶೋರಿ ಶೇಟ್, ತಹಸೀಲ್ದಾರ್ ಮಂಜುಳಾ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್, ಪ್ರಮುಖರಾದ ವಿಕ್ಟರ್ ಡಿಸೋಜ, ಇಂದಿರಾ ದೇವಿಪ್ರಸಾದ್, ಯೋಗಿತಾ ಗೋಪಿನಾಥ್, ಶೀತಲ್ ಯು.ಕೆ., ಶಿಕ್ಷಕಿ ಮಮತಾ ಎಸ್.ಕೆ ಶುಭಹಾರೈಸಿದರು. ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರಸ್ತಾವನೆಗೈದರು. ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಹರಿಣಿ ಸದಾಶಿವ ಶಾಲಾ ವರದಿ ವಾಚಿಸಿದರು. ಡಾ.ಸವಿತಾ ಲಕ್ಷ್ಮೀ, ಪುಷ್ಪಾ ರಾಧಾಕೃಷ್ಣ, ಸೂರಯ್ಯ ಎಸ್.ಆರ್, ನೇತ್ರಾವತಿ ಪಡ್ಡಂಬೈಲ್ ಉಪಸ್ಥಿತರಿದ್ದರು. ಮಮತಾ ಕೆ ಹಾಗೂ ಮಮತಾ ಎಸ್.ಕೆ.ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪ್ರದಾನ, ಗೌರವಾರ್ಪಣೆ

ಕೊಲ್ಚಾರು ಸ.ಹಿ.ಪ್ರಾ ಶಾಲೆ ಶಿಕ್ಷಕಿ ಜಲಜಾಕ್ಷಿ ಹಾಗೂ ಸಂತ ಬ್ರಿಜಿಡ್ಸ್ ಸ.ಹಿ.ಪ್ರಾ ಶಾಲೆ ಶಿಕ್ಷಕಿ ವಲ್ಸಾ ಅವರಿಗೆ ಎಂ.ಬಿ ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನಿಸಲಾಯಿತು. ಸಾಮಾಜಿಕ ಮುಖಂಡ ಲತೀಫ್ ಹರ್ಲಡ್ಕ, ನಾಟ್ಯಪ್ರವೀಣೆ ಮಂಜುಶ್ರೀ ರಾಘವ, ವಿದ್ಯಾರ್ಥಿನಿ ಯಶ್ವಿನಿ ಪಿ.ಭಟ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ಎಂ.ಎಸ್. ಅವರನ್ನು ಗೌರವಿಸಲಾಯಿತು.