ಬೆಳ್ತಂಗಡಿ: ಐಐಟಿ, ಐಐಐಟಿ ಹಾಗೂ ಎನ್‌ಐಐಟಿಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಅಡ್ವಾನ್ಸ್ ಎಕ್ಸಾಂನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.
ಈ ಹಿಂದೆ ನಡೆದ ಜೆಇಇ ಮೈನ್ಸ್ ಶಿಫ್ಟ್ 1 ಮತ್ತು ಜೆಇಇ ಮೈನ್ ಶಿಫ್ಟ್ 2ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದುಕೊಂಡು ಎಕ್ಸೆಲ್‌ನ ಹಲವು ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದರು. ಜೆಇಇ ಅಡ್ವಾನ್ಸ್ ಪರೀಕ್ಷೆ ಅತ್ಯಂತ ಪ್ರತಿಭಾವಂತರಿಗೆ ಕೂಡ ಗಗನ ಕುಸುಮವಾಗಿರುವ ಸಂದರ್ಭದಲ್ಲಿ ಎಕ್ಸೆಲ್‌ನ ವಿದ್ಯಾರ್ಥಿಗಳು ರಾಷ್ಟ್ರದ ಬಹಳ ಕಠಿಣ ಪರೀಕ್ಷೆಯೆನಿಸಿಕೊಂಡ ಜೆಇಇ ಅಡ್ವಾನ್ಸ್‌ನಲ್ಲಿ ಅತ್ಯುತ್ತಮ ರ‌್ಯಾಂಕ್ ಗಳಿಸಿಕೊಳ್ಳಲು ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅತ್ಯಂತ ಗುಣಮಟ್ಟದ ಕೋಚಿಂಗ್ ಕಾರಣವಾಗಿದೆ.
ವೀರಭದ್ರೇಶ್ ಕಟಗೇರಿ ರಾಷ್ಟ್ರಮಟ್ಟದಲ್ಲಿ- 45ನೇ ರ‌್ಯಾಂಕ್, ಪ್ರಥಮ್ ಎಸ್.- 247ನೇ ರ‌್ಯಾಂಕ್, ರೋಹಿತ್ ಮಂಜ- 1125, ಅನುಜ್ ಕೆ.ಎಸ್.- 3421, ಮೊಹಮ್ಮದ್ ರುವೈದ್ ರುಕ್ಸಾರ್- 12308ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸೀಮಿತ ಸೀಟ್‌ಗಳಿರುವ ಐಐಟಿಗಳಿಗೆ ತಮ್ಮ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದಕ್ಕೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.
Excel students' extraordinary achievement