ಬೆಳ್ತಂಗಡಿ: ದೇಶ ರಕ್ಷಣೆ ಮಾಡುವ ಸೈನಿಕರು, ಕಾನೂನು ಸುವ್ಯವಸ್ಥೆ ಕಾಪಾಡುವ ಆರಕ್ಷಕರು ದೇಶದ ಅಮೂಲ್ಯ ಆಸ್ತಿ. ಅವರಿಂದಾಗಿ ನಾವೆಲ್ಲಾ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪಪೂ ಕಾಲೇಜಿನ ವತಿಯಿಂದ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ಭಾರತೀಯ ಸೇನೆ ಮತ್ತು ಕರ್ನಾಟಕ ಆರಕ್ಷಕ ಪಡೆಗಳಲ್ಲಿ ಸೇವೆ ಸಲ್ಲಿಸುವ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಪಾಲಕರನ್ನು ಗೌರವಿಸುವ ‘ರಕ್ಷಕ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಧರು ಹಾಗೂ ಆರಕ್ಷಕರು ನಮ್ಮ ರಕ್ಷಕರಾದರೆ, ರೈತರು ನಮ್ಮ ಪಾಲಕರು ಎಂದರು.
ಪತ್ರಕರ್ತ ರಾಮಚಂದ್ರ ಮಿಜಾರ್ ಮಾತನಾಡಿದರು. ಎಕ್ಸೆಲ್ ಪಪೂ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಭಿರಾಮ್ ಬಿ.ಎಸ್. ಉಪಸ್ಥಿತರಿದ್ದರು. ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ ನಿರೂಪಿಸಿ. ಜೀವ ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರಜ್ವಿತ್ ರೈ ಶೈಕ್ಷಣಿಕ ಸಾಧಕ ಪಟ್ಟಿ ವಾಚಿಸಿದರು. ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಅರಮಲೆ ಬೆಟ್ಟ ಕ್ಯಾಂಪಸ್‌ನ ಪ್ರಭಾರ ಪ್ರಾಚಾರ್ಯ ಡಾ.ಪ್ರಜ್ವಲ್ ವಂದಿಸಿ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ವಿಕಾಸ್ ಹೆಬ್ಬಾರ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಎಕ್ಸೆಲ್ ಪಪೂ ಕಾಲೇಜಿನ ಕರಪತ್ರ ಅನಾವರಣ ಮಾಡಲಾಯಿತು. ಎಕ್ಸೆಲ್ ಮಾಧ್ಯಮ ತಂಡದಿಂದ ಎಕ್ಸೆಲ್ ಮೀಡಿಯಾ ಲೋಕಾರ್ಪಣೆ ನಡೆಯಿತು. ಜತೆಗೆ ಎಕ್ಸೆಲ್ ಆ್ಯಪ್‌ನ್ನು ಬಿಡುಗಡೆ ಮಾಡಲಾಯಿತು. 2024ರ ಸಾಲಿನ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು.