ಮಾನ್ವಿ: ಪಟ್ಟಣದ ನೇತಾಜಿ ಪಿಯು ಕಾಲೇಜ್‌ನ ವಾಣಿಜ್ಯ ವಿಭಾಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ.
ಇದನ್ನೂ ಓದಿ: ಪಿಯು ಪರೀಕ್ಷೆಯಲ್ಲಿ ಬಡ ವಿದ್ಯಾರ್ಥಿಗಳೂ ಟಾಪರ್
ವಾಣಿಜ್ಯ ವಿಭಾಗದ ಎಲ್ಲ 16 ವಿದ್ಯಾರ್ಥಿಗಳಿದ್ದು ಉತ್ತೀರ್ಣರಾಗಿದ್ದಾರೆ. ಶ್ವೇತಾ 559, ಸಾನಿಯಾ 547, ಕವಿತಾ 515, ಸಂಜನಾ 508, ಶಾಯಿಸ್ತಾ 505 ಅಂಕ ಗಳಿಸಿದ್ದರೆ, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 26 ವಿದ್ಯಾರ್ಥಿಗಳ ಪೈಕಿ 23 ಸ್ಟೂಡೆಂಟ್ಸ್ ಉತ್ತೀರ್ಣರಾಗಿದ್ದಾರೆ. ಸಂಜನಾ 545, ಪ್ರಿಯಾಂಕಾ 540, ಸಿದ್ದಪ್ಪ 540, ಗುರುಬಸ್ಸಮ್ಮ 538, ರಂಜಿತಾ 515, ಪ್ರೇಮಾ 513, ಜಮೀರ್ 505 ಅಂಕ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ ತಿಳಿಸಿದ್ದಾರೆ.