ಹಗರಿಬೊಮ್ಮನಹಳ್ಳಿಯಲ್ಲಿ ಬಸ್ ಡಿಪೋ ವ್ಯವಸ್ಥಾಪಕ ವೆಂಕಟಾಚಲಪತಿಗೆ ಎಬಿವಿಪಿ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಎಕ್ಸಾಂ ಸೆಂಟರ್‌ಗೆ ತೆರಳಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಹಬೊಹಳ್ಳಿ ಡಿಪೋ ವ್ಯವಸ್ಥಾಪಕನಿಗೆ ಎಬಿವಿಪಿ ಮನವಿ

ಹಗರಿಬೊಮ್ಮನಹಳ್ಳಿ: ಜೂ.25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಎಕ್ಸಾಂ ಸೆಂಟರ್‌ಗೆ ತೆರಳಲು ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ಪದಾಧಿಕಾರಿಗಳು ಡಿಪೋ ವ್ಯವಸ್ಥಾಪಕ ವೆಂಕಟಾಚಲಪತಿಗೆ ಶನಿವಾರ ಮನವಿ ಸಲ್ಲಿಸಿದರು.

ಎಬಿವಿಪಿ ಜಿಲ್ಲಾ ಕಾರ್ಯದರ್ಶಿ ಅವಿನಾಶ್ ಜಾಧವ್ ಮಾತನಾಡಿ, ತಾಲೂಕಿನಲ್ಲಿ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಬಸ್ ಸೌಲಭ್ಯ ಒದಗಿಸಬೇಕು. ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮ ಅನುಸರಿಸಿ ವಿದ್ಯಾರ್ಥಿಗಳಲ್ಲಿನ ಭಯ ಹೋಗಲಾಡಿಸಬೇಕು ಎಂದು ಒತ್ತಾಯಿಸಿದರು.

ಡಿಪೋ ವ್ಯವಸ್ಥಾಪಕ ವೆಂಕಟಾಚಲಪತಿ ಮಾತನಾಡಿ, ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ದೈಹಿಕ ಅಂತರ ಕಾಪಾಡಲು ಸೀಟುಗಳಿಗೆ ಮಾರ್ಕ್ ಮಾಡಲಾಗಿದ್ದು, ಸಂಚಾರಕ್ಕೂ ಮುನ್ನ ಬಸ್‌ಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಚಿರಂಜೀವಿ ಬೆಳ್ಳಕ್ಕಿ, ಚಂದ್ರಶೇಖರ್ ಬೆಸ್ತರ್ ಇದ್ದರು.