ಕುಂದಾಪುರ: ವಿವಿಧ ವಾನಸಿಕ ಒತ್ತಡಗಳಿಂದ ಮಾದಕ ವ್ಯಸನ ಸೇರಿದಂತೆ ನರಮನೋವೈದ್ಯಕೀಯ ಅಸ್ವಸ್ಥತೆಗಳು ಉಲ್ಬಣಗೊಳ್ಳಬಹುದು ಎಂದು ಮನೋವೈದ್ಯ ಡಾ.ಪ್ರಕಾಶ್ ಸಿ.ತೋಳಾರ್ ಹೇಳಿದರು.
ಕುಂದಾಪುರ ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಆಶ್ರಯದಲ್ಲಿ ಕುಂದಾಪುರದ ಎನ್.ಎನ್.ಓ ಕಮ್ಯುನಿಟಿ ಸೆಂಟರ್ ಮಿನಿ ಸಭಾಭವನದಲ್ಲಿ ಪ್ರೌಢಶಾಲಾ, ಕಾಲೇಜುಗಳ ಆಯ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗು ಮಾದಕ ದ್ರವ್ಯ ಸೇವೆನೆಯಿಂದ ಆಗುವ ಅನಾಹುತ ಮತ್ತು ಮಾನಸಿಕ ಒತ್ತಡ ವಾಹಿತಿ ಕಾರ್ಯಾಗಾರದಲ್ಲಿ ವಾತನಾಡಿದರು.
ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮನೋವೈದ್ಯ ಡಾ.ಪ್ರಕಾಶ್ ಸಿ.ತೋಳಾರ್ ಅವರನ್ನು ಸನ್ಮಾನಿಸಲಾಯಿತು. ನಮ್ಮ ನಾಡ ಒಕ್ಕೂಟ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ನಮ್ಮ ನಾಡ ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹಿರ್ ಅಹ್ಮದ್, ಎನ್‌ಎನ್‌ಓ ಕುಂದಾಪುರ ಟಕಾಧ್ಯಕ್ಷ ಎಸ್.ದಸ್ತಗಿರ್ ಸಾಹೇಬ್ ಕಂಡ್ಲೂರು, ಕಾರ್ಯಕ್ರಮ ಸಂಯೋಜಕ ಅಬುಮೊಹಮ್ಮದ್ ಕುಂದಾಪುರ, ಮನ್ಸೂರ್ ಇಬ್ರಾಹಿಂ, ಕಮ್ಯೂನಿಟಿ ಸೆಂಟರ್‌ನ ಉಪಾಧ್ಯಕ್ಷ ಜವಾಲ್ ಗುಲ್ವಾಡಿ, ಕೋಶಾಧಿಕಾರಿ ಎಸ್.ಅನ್ವರ್ ಕಂಡ್ಲೂರ್, ನಮ್ಮ ನಾಡ ಒಕ್ಕೂಟ ಕೋಶಾಧಿಕಾರಿ ಪೀರ್ ಸಾಹೇಬ್, ಟಿ.ಎಸ್.ಅನ್ಸಾರ್ ಉಡುಪಿ, ಮೊಹಮ್ಮದ್ ಗುಲ್ವಾಡಿ, ಅಬ್ದುಲ್ ಖಾದರ್ ಮೂಡುಗೋಪಾಡಿ, ನಿಹಾರ್ ಅಹ್ಮದ್, ಜಾವದ್ ಅಕ್ಬರ್ ಹಂಗಾರಕಟ್ಟೆ ಉಪಸ್ಥಿತರಿದ್ದರು.
ಕುಂದಾಪುರ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿದರು. ನಮ್ಮ ನಾಡ ಒಕ್ಕೂಟದ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಸದಸ್ಯ ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿದರು.