ಜಿಲ್ಲೆ

ಮೆಡಿಕಲ್ ಕಾಲೇಜು ಬಂದೇ ಬರುತ್ತದೆ - ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿಕೆ

Mangaluru - Nishantha Narayana

ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಬಜೆಟ್‌ನಲ್ಲಿ ಪ್ರಸ್ತಾವನೆ ಆಗಿದ್ದು, ಯಾವತ್ತಾದರೂ ಬಂದೇ ಬರುತ್ತದೆ. ಈ ಕಾರಣದಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಜಾಗ ಕಾಯ್ದಿಸಲಿಸಲು ಕಾರಣಕರ್ತರಾದವರನ್ನು ಸ್ಮರಿಸಿಕೊಳ್ಳಬೇಕಾಗಿದೆ. ಪಡುಮಲೆ ಅಭಿವೃದ್ಧಿಗೆ ಸರ್ಕಾರ ೨೦೧೩ರಲ್ಲಿ ೫ಕೋಟಿಯನ್ನು ನೀಡಿದ್ದು, ಈ ಹಿಂದೆಯೂ ಅನುದಾನ ಪುತ್ತೂರಿಗೆ ಬಂದಿತ್ತು ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

ಸೈಲೆಂಟ್ ಆಗಿಲ್ಲ. ಪಕ್ಷ ಬಿಟ್ಟಿಲ್ಲ. ಹಾಗೆಂದು ಎಲ್ಲಿ ಕರೆಯುತ್ತಾರೋ ಅಲ್ಲಿಗೆ ಹೋಗುತ್ತಿದ್ದೇನೆ. ಉಳ್ಳಾಲದಲ್ಲಿ, ಮಂಗಳೂರಿನಲ್ಲಿ ಕರೆಯುತ್ತಾರೆ. ಪುತ್ತೂರಿನಲ್ಲಿ ಎಂ.ಎಲ್.ಎ ಗಟ್ಟಿಯಾಗಿದ್ದಾರೆ. ಹಿರಿಯರ ಅಥವಾ ಪ್ರಾಯದವರು ಬೇಡ ಅಂತ ಇರಬಹುದು. ಅಗತ್ಯವಿದ್ದರೆ ಶಕು ಅಕ್ಕನಿಗೆ ಕರೆ ಮಾಡಿದರೆ ಸಾಕು ಎಂಬ ಅಭಿಪ್ರಾಯ ಇರಬಹುದು. ಕರಾವಳಿಯ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆಯಾಗಿದ್ದು, ಅಲ್ಲಿ ಸ್ವಲ್ಪ ಬ್ಯುಸಿಯಾಗಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೆಡಿಕಲ್ ಕಾಲೇಜಿನಲ್ಲಿ ಅಂಕ ಇದ್ದವರಿಗೆ ಮಾತ್ರ ಮೆಡಿಕಲ್ ಕಾಲೇಜು ಸೀಟು ಲಭಿಸುತ್ತದೆ. ಅಲ್ಲಿ ಬಡವರು ಶ್ರೀಮಂತರು ಎಂದೇನಿಲ್ಲ. ಊರು ಬೆಳೆಯಲು ಮೆಡಿಕಲ್ ಕಾಲೇಜು ಬಹಳ ಮುಖ್ಯವಾಗಿದೆ. ಮೆಡಿಕಲ್ ಕಾಲೇಜಿಗೆ ೪೦ ಎಕರೆ ಜಾಗ ಎಲ್ಲಿ ಹುಡುಕುವುದು ಎಂದ ಸಂದರ್ಭ ಒಬ್ಬನೆ ಒಬ್ಬ ಜಾಗ ಕೊಡಲು ಮುಂದೆ ಬರಲಿಲ್ಲ. ಮೆಡಿಕಲ್ ಕಾಲೇಜು ಪುತ್ತೂರಿಗೆ ಮಂಜೂರು ಮಾಡಿದ ಸಿಎಂ., ಡಿಸಿಎಂ, ಸಚಿವರ ಜೊತೆಗೆ ಮೆಡಿಕಲ್ ಕಾಲೇಜು ಜಾಗ ನೀಡಿದ ಸೇಡಿಯಾಪು ಮನೆಯವರಿಗೂ ಮತ್ತು ಅದನ್ನು ಉಳಿಸಲು ಹೋರಾಟ ಮಾಡಿದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.