ಗದಗ: ಕಾನೂನು, ನ್ಯಾಯ ಮಾನನ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು ರವಿವಾರ ಜಗಜ್ಯೋತಿ ಬಸವೇಶ್ವರರ ಮೂತ್ತಿಗೆ ಹೊಗುವ ಮುಖ್ಯದ್ವಾರದಲ್ಲಿ ಮಾಜಿ ಶಾಸಕ ಶ್ರೀ ಸಿ.ಎಸ್. ಮುತ್ತಿನಪೆಂಡಿಮಠ ಹೆಸರನ್ನು ರಸ್ತೆಗೆ ನಾಮಕರಣ ಮಾಡಿದರು.
ನಂತರ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಅತ್ಯಂತ ಮುಖ್ಯ ಸುಂದರ ರಸ್ತೆಗೆ ನಾಮಕರಣ ಆಗಿರೋದು ಎಲ್ಲರಿಗೂ ಸಂತೋಷ ತಂದಿದೆ. ಮಾಜಿ ಶಾಸಕ ಸಿ ಎಸ್. ಮುತ್ತಿನಪೆಂಡಿಮಠ ಅವರ ರಾಜಕೀಯ ಜೀವನ ನಂತರದ ಒಡನಾಟ ಬಾಂದವ್ಯ ಅನ್ಯೋನ್ಯವಾಗಿತ್ತು. ಅವರೊಂದಿಗೆ ಡಿ.ಎರ್. ಪಾಟೀಲ ಒಡನಾಟ ಸ್ನೇಹ ಸಂಬಂಧ ತುಂಬಾ ಚನ್ನಾಗಿತ್ತು. ಮುತ್ತಿನಪೆಂಡಿಮಠ ಅವರ ಸ್ನೇಹಿತರನ್ನು ನಾನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದೆ. ಅವರ ತತ್ವ ಸಿದ್ದಾಂತ ಮೆಚ್ಚುವಂತವು. ಅವರು ನಮ್ಮ ಹಿತೈಷಿಗಳು ಎಂಬುದು ಸಂತೋಷ ಎನಿಸಿತು.
ರಾಜಕಾರಣದಲ್ಲಿ ಸಕ್ರಿಯವಾಗಿ ಸ್ವಲ್ಪದಿನ ಇದ್ದರು ಸಹ ಬಹಳಷ್ಟು ಜನರನ್ನು ಗಳಿಸಿಕೊಂಡಿದ್ದರು. ಅನೇಕ ಆತ್ಮೀಯ ಗೆಳೆಯ ರನ್ನು ಸಂಪಾದಿಸಿದ್ದರು, ಅವರದ್ದು ಸ್ನೇಹಪರ ಬದುಕಾಗಿತ್ತು. ಅವರ ಸಂಸ್ಕೃತಿ ಮೇಲುಸ್ಥರದ ವ್ಯಕ್ತಿತ್ವ ಎಲ್ಲರನ್ನು ಸೆಳೆಯುತ್ತಿತ್ತು ಎಂದರು.
ಪ್ರತಿಷ್ಠನದ ಅಧ್ಯಕ್ಷ ವಸಂತ ಮೇಟಿ ಹೆಳೀದಂತೆ ಅವರ ಪುತ್ಥಳಿ ಸ್ಥಾಪನೆ ಬಗ್ಗೆ ಮುಂದಿನ ದಿನಮಾನಗಳ್ಳಲ್ಲಿ ಕ್ರಮ ವಹಿಸೋಣ ಎಂದರು. ಈ ರಸ್ತೆಗೆ ಅವರ ಹೆಸರು ಅಂತ್ಯತ ಸಮಂಜಸವಾಗಿದೆ. ಇದು ಪ್ರವಾಸಿ ತಾಣ ವಾಗಿ ಎಲ್ಲರನ್ನು ಸೇಳೆಯಲಿದೆ ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಮಾಜಿ ಸಚಿವ ಎಸ್. ಎಸ್. ಪಾಟೀಲ ಮಾತನಾಡಿ, ಸಿ.ಎಸ್. ಮುತ್ತಿನಪೆಂಡಿಮಠ ಅವರು ವಕೀಲರಾಗಿ ಜನಸೇವೆ ಮಾಡಿದ್ದಾರೆ. ನಾನು ಶಾಸಕನಾಗಲು ಪ್ರಮುಖ ಕಾರಣ ಸಿ. ಎಸ್. ಮುತ್ತಿನಪೆಂಡಿಮಠ ಎಂದರೆ ತಪ್ಪಾಗದು. ಗದಗ ಜಿಲ್ಲೆಯ ನೀರಿನ ಬವಣೆ ತೀರಿಸಿದ ಬಗೀರಥ ಸಚಿವ ಎಚ್. ಕೆ. ಪಾಟೀಲ ಎಂದು ಹೇಳಿದರು.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರಸ್ತೆಗೆ ಸಿ. ಎಸ್. ಮುತ್ತಿನಪೆಂಡಿಮಠ ಹರಸರಿಡಲು ನಗರಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ ಅಂಗಿಕರಿಸಲಾಗಿದೆ. ಅವರು ಇರಡು ಬಾರಿ ಶಾಸಕರಾಗಿ ಉತ್ತಮ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಕಾರ್ಯಗಳ ಮೂಲಕ ಜನಸಾಮಾನ್ಯರಲ್ಲಿ ಇಂದಿಗೂ ಅವರು ಅಜರಾಮರರಾಗಿದ್ದಾರೆ ಎಂದರು.
ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ, ಜನಸೇವೆ, ನ್ಯಾಯವಾದಿಗಳಾಗಿ ಮಾಡಿದ ಅವರ ಸೇವೆ ಅಗಾದವಾದದು. ನಾಡನ್ನ ಸಂಮೃದ್ದವಾಗಿ ಕಟ್ಟಲು ಮುತ್ತಿನಪೆಂಡಿಮಠ ಅಂತಹವರು ಮತ್ತೆ ಮತ್ತೆ ಹುಟ್ಟಿಬರಬೇಕು. ಸಾರ್ವಜನಿಕರ ಸೇವೆಯಲ್ಲಿ ಕೆಲಸ ಮಾಡುವಾಗ ಅನೇಕ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ನ್ಯಾಯನಿಷ್ಠುರಿಯಾಗಿ ತಮ್ಮ ಕೆಲಸ ನಿರಂತರವಾಗಿ ಮಾಡುತ್ತಾ ಮುಂದೆ ಸಾಗಿದವರು ಅದಕ್ಕಾಗಿಯೇ ಅವರು ಇಂದಿಗೂ ಜನಮಾನಸದಲ್ಲಿ ಇದ್ದಾರೆ. ವ್ಯಕ್ತಿ ವಿಕಾಸಕ್ಕೆ ಅಸ್ಥಿತ್ವಕ್ಕೆ ಸಮಾಜ ಅಗತ್ಯ. ಅಂತಹ ಸಮಾಜ ಏಳ್ಗೆಗೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ವ್ಯಕ್ಯಿಯಾಗಿದ್ದರು ಸಿ. ಎಸ್. ಮುತ್ತಿನಪೆಂಡಿಮಠ ಎಂದು ಹೇಳಿದರು.
ಶ್ರೀ ಸಿ.ಎಸ್. ಮುತ್ತಿನಪೆಂಡಿಮಠ ಪ್ರತಿಷ್ಠಾನ, ಗದಗ-ಬೇಟಗೇರಿ ನಗರ ಸಭೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸದಸ್ಯರಾದ ಎಲ್.ಡಿ.ಚಂದಾವರಿ, ಪದ್ಮಾ ಕಟಗಿ, ಅನೀಲ ಅಬ್ಬಿಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ.ಹಿರೆಮನಿ ಪಾಟೀಲ, ಡಾ. ಎಂ.ಬಿ.ಪಾಟೀಲ, ವಿಶ್ವನಾಥ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ ಹಾಜರಿದ್ದರು.