ಜಿಲ್ಲೆ

ಖಾನಾಪುರದಲ್ಲಿ 1.40 ಕೋಟಿ ಮೌಲ್ಯದ ಮದ್ಯ ನಾಶ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಅಕ್ರಮ ಸಾಗಣೆ ಹಾಗೂ ಮಾರಾಟ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 1.40 ಕೋಟಿ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಖಾನಾಪುರ ತಾಲೂಕಿನ ಹೊನಕಲ್ಲ ಗ್ರಾಮದಲ್ಲಿ ನಾಶಪಡಿಸಲಾಯಿತು ಎಂದು ಅಬಕಾರಿ ಬೆಳಗಾವಿ ದಕ್ಷಿಣ ಉಪ ಆಯುಕ್ತ ಎಂ.ವನಜಾಕ್ಷಿ ತಿಳಿಸಿದರು.
ಖಾನಾಪುರ ವಲಯ ವ್ಯಾಪ್ತಿಯಲ್ಲಿ 2023 ಡಿಸೆಂಬರ್ ರಿಂದ 2024  ಜನವರಿ ನಡುವಿನ ಅವಧಿಯಲ್ಲಿ ದಾಖಲಾಗಿದ್ದ 72 ಪ್ರಕರಣಗಳಲ್ಲಿ  1150 ಬಾಕ್ಸ್‌ಗಳಲ್ಲಿನ 10,300  ಗೋವಾ ಲೀಟರ್ ಮದ್ಯ ,135 ಲೀಟರ್ ಬಿಯರ್ ಹಾಗೂ 130 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿತ್ತು. ಆ ಮದ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಆಗದಂತೆ ಹೊನಕಲ್ಲ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಾಶ ಪಡಿಸಲಾಗಿದೆ ಎಂದು ವಿವರಿಸಿದರು.
ಅಬಕಾರಿ ಉಪ ಅಧೀಕ್ಷಕ ರವಿ ಮುರಗೋಡ, , ರವಿ ಹೊಸಳ್ಳಿ , ವಲಯ ನಿರೀಕ್ಷಿಕರು ಮಲ್ಲೇಶ ಉಪ್ಪಾರ ಇತರರಿದ್ದರು.