ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್‌ರಾಮ್ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಲಕ್ಷ್ಮಣ್, ಪ್ರಮುಖರಾದ ಭಟ್ಟ ಪ್ರಸಾದ್, ಸಿ.ವೆಂಕಟೇಶ್, ಜಿ.ರಾಮಣ್ಣ, ರಾಧಿಕಾ, ಸಂಗೀತಾ ಇತರರಿದ್ದರು. 
ಜಿಲ್ಲೆ

ಮಾಜಿ ಉಪಪ್ರಧಾನಿ ಚಿಂತನೆಗಳು ಅನುಕರಣೀಯ

ನರೇಶ್ ಕುಮಾರ್

ಕಂಪ್ಲಿ: ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್ ಚಿಂತನೆಗಳಿಂದಾಗಿ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಯಿತು ಎಂದು ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಲಕ್ಷ್ಮಣ ಹೇಳಿದರು.

ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡಾ.ಬಾಬು ಜಗಜೀವನ್‌ರಾಮ್ ಅವರ 117ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ದೇಶ ಉದ್ಧಾರವಾದರೆ ದೇಶದ ಪ್ರಜೆಗಳು ಉದ್ಧಾರವಾಗುತ್ತಾರೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳುತ್ತಿದ್ದ ಡಾ.ಬಾಬೂಜಿ ಅವರ ಚಿಂತನೆಗಳು ಸದಾ ಅನುಕರಣೀಯವಾಗಿವೆ. ಪಾರಂಪರಿಕ ಕೃಷಿಯೊಂದಿಗೆ ದೇಶೀಯ ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡರು. ಶೋಷಿತ ಸಮುದಾಯದವರನ್ನು ಜಾಗೃತಿಗೊಳಿಸುವ ಮೂಲಕ ಮುಖ್ಯವಾಹಿನಿಗೆ ಕರೆತರುವಲ್ಲಿ ಅವರ ಶ್ರಮ ಆದರ್ಶವಾದದ್ದು ಎಂದರು.

ತಾಲೂಕು ಕಚೇರಿ ಸಿಬ್ಬಂದಿ ಮಾಲತೇಶ ದೇಶಪಾಂಡೆ, ರಾಧಿಕಾ, ಸಂಗೀತಾ, ವಸತಿ ನಿಲಯ ಪಾಲಕ ಕೆ.ವಿರೂಪಾಕ್ಷಪ್ಪ, ಪುರಸಭೆ ಸದಸ್ಯ ಭಟ್ಟ ಪ್ರಸಾದ್, ಸಿ.ವೆಂಕಟೇಶ್, ಜಿ.ರಾಮಣ್ಣ, ವಿ.ವೆಂಕಟರಮಣ, ಬಾವಿಕಟ್ಟೆ ದೇವೇಂದ್ರ ಇತರರಿದ್ದರು.