ಕೊಪ್ಪಳ: ರೈತರಿಗೆ ಮಾರಕ ಆದೇಶ ಸರ್ಕಾರ ಮಾಡಿದೆ. ಇದೊಂದು ಹುಚ್ಚು ದೊರೆ ಸರ್ಕಾರ. ಇದಕ್ಕೆ ಕಣ್ಣು, ಕಿವಿ ಏನೂ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ರೈತರ ಪಂಪ್ ಸೆಟ್ ಗೆ ನೀಡಿದ ಸೌಲಭ್ಯ ವಾಪಸ್ ಪಡೆಯಲು ಆಗ್ರಹಿಸಿ ಸಂಸದ ಸಂಗಣ್ಣ ಕರಡಿ ಉಒವಾಸ ಸತ್ಯಾಗ್ರಹ ಬೆಂಬಲಿಸಿ ಮಂಗಳವಾರ ಮಾತನಾಡಿದರು.
ಸಿಎಂ, ಸಚಿವ ಜಾರ್ಜ್ ರಾಜೀನಾಮೆ ಕೊಡಿ. ತಕ್ಷಣ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ನಮ್ಮ ನಾಯಕರೆಲ್ಲ ಹೋರಾಟ ಮಾಡುತ್ತೇವೆ.
ಇಂದು ಸಂಜೆಯೊಳಗೆ ಮುಂದಿನ ಹೋರಾಟ ರೂಪುರೇಷ ಸಿದ್ಧಗೊಳಿಸಿ. ಆದರೆ ಉಪವಾಸ ಹಿಂಪಡೆಯಿರಿ ಎಂದು ಸಂಗಣ್ಣಗೆ ಒತ್ತಾಯಿಸಿದರು.
ಮಂತ್ರಿಗಳದ್ದು ಏನೂ ನಡೆಯಲ್ಲ. ಸಿದ್ದರಾಮಯ್ಯಂದು ಏನೂ ನಡೆಯಲ್ಲ. ಎಲ್ಲ ಬಾಯಿ ಮುಚ್ಚಿಕೊಂಡಿರಬೇಕು. ಸುರ್ಜೇವಾಲ, ವೇಣುಗೋಪಾಲ್ ಹಾದಿ ಬೀದಿಯಲ್ಲಿ ನಿಂತು ಮಾತನಾಡದಂತೆ ತಿಳಿಸಿದ ಮೇಲೆ ಸಿದ್ದರಾಮಯ್ಯ ಮಾತನಾಡಿದರು.
ಇವರದು ಏನೂ ನಡೆಯಲ್ಲ. ಸಂಜೆ ಒಳಗೆ ಸರ್ಕಾರ ಆದೇಶ ಮಾಡದಿದ್ದಲ್ಲಿ ಉಪವಾಸ ನಿಲ್ಲಿಸಿ. ಅವರಿಗೆ ಗಡುವು ಕೊಡೋಣ. ಅವರು ಮಾಡದಿದ್ದಲ್ಕಿ ನಾನು ಸೇರಿ ಎಲ್ಲ ರಾಜ್ಯ ನಾಯಕರು ಸೇರಿ ಹೋರಾಟ ಮಾಡೋಣ.
ಇಂಥ ದುಸ್ಥಿತಿ ರಾಜ್ಯಕ್ಕೆ ಹಿಂದೆ ಬಂದಿರಲಿಲ್ಲ. ಯಾರು ನಿಮಗೆ ಉಚಿತ ವಿದ್ಯುತ್ ನೀಡಲು ಹೇಳಿದ್ದ? ರೈತರಿಗೆ ಬಹಳ ಅನ್ಯಾಯ ಆಗಿದೆ. ತಕ್ಷಣ ಆದೇಶ ಹಿಂಪಡೆಯಿರಿ ಎಂದು ಆಗ್ರಹಿಸಿದರು.