ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬರ ಅಧ್ಯಯನ ನಡೆಸಿದರು 
ಜಿಲ್ಲೆ

ಸಿಎಂ ಸಿದ್ದರಾಮಯ್ಯ ಮಂಗನಂತೆ:ಮಾಜಿ ಡಿಸಿಎಂ ಈಶ್ವರಪ್ಪ‌ ಟೀಕೆ

ex cm ks iswarappa alliged cm siddaramayya koppal kustagi drought study

Kopala - Raveendra V K

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗನಿದ್ದಂತೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಟೀಕಿಸಿದರು.

ನಾನು ಬಿಜೆಪಿ ಶಿಸ್ತಿನ ಸಿಪಾಯಿ. ನಮ್ಮ ನಾಯಕರು ಸೂಚಿಸಿದಂತೆ ನಡೆದುಕೊಂಡಿವೆ. ಆದರೆ, ಸಿದ್ದರಾಮಯ್ಯ ಮಂಗನಂತೆ. ಆತನಿಗೆ ನನ್ನನ್ನು ಹೋಲಿಸಬೇಡಿ. ಈ ಹಿಂದೆ ಅಧಿಕಾರಕ್ಕಾಗಿ ದೇವೇಗೌಡರಿಗೆ ಮೋಸ ಮಾಡಿ ಜೆಡಿಎಸ್​ ಬಿಟ್ಟರು.

ಈಗ ಕಾಂಗ್ರೆಸ್​ನವರು ಡಿ.ಕೆ.ಶಿವರಕುಮಾರ್​ ಅವರನ್ನು ಸಿಎಂ ಮಾಡುತ್ತೇವೆ ಎಂದರೆ, ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ ಎಂದು ತಮ್ಮನ್ನು ಸವಕಲು ನಾಣ್ಯ ಎಂದು ಕರೆದ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಸಿದ್ದರಾಮಯ್ಯ ಸ್ವಯಂಘೋಷಿತ ಹಿಂದುಳಿದ ನಾಯಕ. ಈ ಹಿಂದೆ ತಾವೇ ಸಿಎಂ ಇದ್ದರೂ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರದರೂ ಬಾಯಿ ತೆರೆಯಲಿಲ್ಲ. ಈಗಲೂ ಮೌನವಹಿಸಿದ್ದಾರೆ. ಹೀಗಿದ್ದು, ಅಂಬೇಡ್ಕರ್​, ದೇವರಾಜ ಅರಸು ನಂತರ ತಾನೇ ಹಿಂದುಳಿದ ನಾಯಕ ಎಂದು ಹೇಳಿಕೊಳ್ಳಲು ನಾಚಿಕೆ ಆಗುವುದಿಲ್ಲವಾ ಎಂದು ಕುಷ್ಟಗಿ ಬರ ಅಧ್ಯಯನ ವೇಳೆ ಕಿಡಿಕಾರಿದರು.

ಸಚಿವ ಮುನಿಯಪ್ಪ ನ್ಯಾ.ಸದಾಶಿವ ಆಯೋಗ ವರದಿ ಜಾರಿ ಮಾಡಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಲಿ. ಸಿದ್ದರಾಮಯ್ಯ ಸಹವಾಸ ಮಾಡಿ ಅವರೂ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಒಳ ಮೀಸಲು ಜಾರಿ ಮಾಡುವುದು ಬಿಟ್ಟು, ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನೀಡುತ್ತಿದ್ದಾರೆಂದು ಟೀಕಿಸಿದರು.