ಮಂಡ್ಯ: ಜಿಲ್ಲೆಯಲ್ಲಿ ಒಂದೂ ಬೆಳೆಯನ್ನು ಬೆಳೆಯಲು ಸಾಧ್ಯವಾಗಿಲ್ಲ. ಪರಿಣಾಮ ರೈತರ ಆರ್ಥಿಕತೆ ಮೂರು ವರ್ಷ ಹಿಂದಕ್ಕೆ ಹೋಗಿದೆ. ಈ ನಷ್ಟವನ್ನು ತುಂಬುವವರು ಯಾರು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ ಪ್ರಶಿಸಿದರು.
ಕಾಮಗಾರಿ ನೆಪದಲ್ಲಿ ನಾಲೆಗಳಿಗೆ ನೀರು ಹರಿಸದೇ ಜನ, ಜಾನುವಾರುಗಳು ಪರದಾಡುವಂತೆ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು. ಕಾವೇರಿ ಹೋರಾಟಕ್ಕೂ ಕ್ಯಾರೆ ಎನ್ನದ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ನಮ್ಮ ರೈತರ ಬಾಯಿಗೆ ಮಣ್ಣು ಬೀಳುವಂತೆ ಮಾಡಿದೆ ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಕೊಪ್ಪ ಜೆಡಿಎಸ್ ಮುಖಂಡ ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬೆಂಬಲಿಸಬೇಕು. ಎಚ್‌ಡಿಕೆ ಆಡಳಿತದಲ್ಲಿ ಸಾರಾಯಿ ಮತ್ತು ಲಾಟರಿ ನಿಷೇಧ, ಗ್ರಾಮ ವಾಸ್ತವ್ಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಸದಾ ಜನಪರ ಸಮಾಜಮುಖಿ ಚಿಂತನೆಗಳನ್ನು ಇಟ್ಟುಕೊಂಡಿರುವ ವ್ಯಕ್ತಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಲಿದ್ದಾರೆ ತಿಳಿಸಿದರು.
ಮುಖಂಡರಾದ ಆಬಲವಾಡಿ ರಾಮಣ್ಣ, ಬಿದರಕೋಟೆ ನಾಗಲಿಂಗಯ್ಯ ಇದ್ದರು.