ವಿಜಯವಾಣಿ ಸುದ್ದಿಜಾಲ ಗದಗ
ನಗರದ ರೋಟರಿ ಸಂಸ್ಥೆಯಲ್ಲಿ ಇತ್ತೀಚೆಗೆ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ವೆಲ್ ೇರ್ ಸೊಸೈಟಿ ಅಧ್ಯ ಶ್ರೀಧರ ಸುಲ್ತಾನಪುರ ಮಾತನಾಡಿ, ಇ ತ್ಯಾಜ್ಯ ನಮ್ಮ ಪರಿಸರ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಆದ್ದರಿಂದ, ಪ್ರತಿಯೊಬ್ಬರು ಇ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಭಾರತ ದೇಶವು ಪ್ರತಿ ವರ್ಷ ಸುಮಾರು 1.6 ಮೆಟ್ರಿಕ್ ಟನ್ ಎಲೆಕ್ಟ್ರಾನಿಕ ತ್ಯಾಜ್ಯನ್ನು ಸೃಷ್ಠಿಸುತ್ತದೆ. ಇವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಅವಶ್ಯಕವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಗರದಲ್ಲಿ ಇ&ತ್ಯಾಜ್ಯ ಉತ್ಪಾದನೆಯಲ್ಲಿ ಭಾರಿ ಹೆಚ್ಚಳವಾಗಿದೆ. ನಗರ ಮತ್ತು ರಾಜ್ಯದಲ್ಲಿ ಇ ತ್ಯಾಜ್ಯದ ಸುರತ ನಿರ್ವಹಣೆಗೆ ಬಲವಾದ ಮತ್ತು ಸಾಮೂಹಿಕ ಕ್ರಮವು ಬರುತ್ತಿಲ್ಲ. ಇದರಿಂದ ನಮ್ಮ ಸುತ್ತಮುತ್ತಲಿನ ಪರಿಸರವು ಕಲುಷಿತಗೊಳ್ಳುತ್ತಿದ್ದು ಅನೇಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರು ಹಾಗೂ ಕಸ ವಿಲೇವಾರಿ ಮಾಡುವ ಸಂಸ್ಥೆಗಳು ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ ಪರಸರನ್ನು ರಸಬೇಕು. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಗದಗ ಬೆಟಗೇರಿ ಇ&ತ್ಯಾಜ್ಯ ಬಿನ್ ಅಳವಡಿಸಿ ಜಾಗೃತಿ ಮೂಡಿಸುತ್ತಿದೆ ಎಂದರು.
ರೋಟರಿ ಸಂಸ್ಥೆಯ ಅಧ್ಯ ಚಂದ್ರಮೌಳಿ ಜಾಲಿ, ವೀಣಾ ತಿರ್ಲಾಪೂರು, ಶಿವಾಚಾರ್ಯ ಹೊಸಳ್ಳಿಮಠ, ಮಹಾಂತೇಶ ಬಾತಾಖಾನಿ, ಎಚ್. ಎಸ್. ಪಾಟೀಲ, ವಿಶ್ವನಾಥ ಯಳಮಲಿ, ರಾಜಶೇಖರ ಬಳ್ಳಾರಿ, ಪ್ರದಿಪ ಉಗಲಾಟ, ಕೊಟ್ರೇಶ ಹಿರೇಗೌಡರ ಹಲವರು ಇದ್ದರು.