Evils are removed by Linga Puja 
ಜಿಲ್ಲೆ

ಲಿಂಗ ಪೂಜೆಯಿಂದ ದುಶ್ಚಟಗಳು ದೂರ

ಹುನಗುಂದ: ನಿತ್ಯ ಲಿಂಗಪೂಜೆ ಮಾಡಿದರೆ ಉತ್ಕಷ್ಟ ವಿಚಾರಗಳು ಬರುತ್ತವೆ ಎಂದು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.

ಪಟ್ಟಣದ ವಿಜಯಮಹಾಂತ ಪ್ರೌಢಶಾಲೆ ಸಭಾ ಭವನದಲ್ಲಿ ಮಂಗವಾರ ಆಯೋಜಿಸಿದ್ದ ಗುರುಬಸವಾರ್ಯ ಮಠ ಗುರುಗಳ 46ನೇ ಪುಣ್ಯಸ್ಮರಣೆ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗಪೂಜೆಯಿಂದ ದುಶ್ಚಟಗಳು ಮರೆಯಾಗಿ ಧನಾತ್ಮಕ ಚಿಂತನೆಗಳು ರೂಪಗೊಂಡು ಸಮಾಜದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ ಎಂದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಂಗಣ್ಣ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಳ್ಳಬೇಕು ಎಂದರು.

ಮಾಜಿ ಸೈನಿಕ ಡಾ.ಸುಭಾಷ ಚಂದ್ರ ಪೆಂಟಾ ಮಾತನಾಡಿದರು.

ಶಿರೂರಿನ ಡಾ.ಬಸವಲಿಂಗ ಸ್ವಾಮಿಗಳು, ವಿ.ಮ.ವಿ.ವ ಸಂಘದ ನಿರ್ದೇಶಕರಾದ ಅರುಣೋದಯ ದುದ್ಗಿ, ಎಂ.ಎಸ್.ಮಠ, ಬಸವರಾಜ ಕೆಂದೂರ, ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಸಂಗಣ್ಣ ಚಿನಿವಾಲರ ಇದ್ದರು.