ಅಳವಂಡಿ: ಕ್ಷಯರೋಗ ಸಾಂಕ್ರಾಮಿಕ ಖಾಯಿಲೆಯಾಗಿದ್ದು, ಕ್ಷಯರೋಗಿಗಳಿಂದ ಅಂತರ ಕಾಪಾಡಿ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.
ಇದನ್ನೂ ಓದಿ: ಕ್ಷಯರೋಗ ನಿರ್ಮೂಲನಾ ದಿನಾಚರಣೆ ಜಾಗೃತಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ ವತಿಯಿಂದ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಕ್ಷಯರೋಗ ಮೈಕ್ರೊ ಬ್ಯಾಕ್ಟಿರಿಯಂ ಟ್ಯೂಬರ ಕ್ಯೂಲಾಸಿಸ್ ಸೂಕ್ಷ್ಮಣುವಿನಿಂದ ತೀವ್ರಗತಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಉಸಿರಾಟ ಮೂಲಕ ಮಾನವನ ದೇಹ ಸೇರಿಕೊಂಡು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೊಂಕಾಗಿ ಪರಿಣಮಿಸಿ, ರೋಗವಾಗಿ ಹೊರಹೊಮ್ಮುತ್ತದೆ.
ನಿಕ್ಷಯ್ ಪೋಷಣ್ ಯೋಜನೆ ಅಡಿಯಲ್ಲಿ ದೃಡಪಟ್ಟ ಎಲ್ಲ ಕ್ಷಯರೋಗಿಗಳಿಗೆ ತಿಂಗಳಿಗೆ 1000ರೂ. ಡಿಬಿಟಿ ಮುಖಾಂತರ ಅವರ ಖಾತೆಗೆ ಕಳಿಸಲಾಗುವುದು. ದುಶ್ಚಟಗಳನ್ನು ತೊರೆದು ಅರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಿ. ಎಲ್ಲರೂ ಕ್ಷಯಮುಕ್ತ ಭಾರತ ಭಾರತ ನಿರ್ಮಿಸಲು ಶ್ರಮಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಪ್ರಾಥಮಿಕ ಆರೋಗ್ಯ ಕೇಂದ್ರ ವೈಧ್ಯಾದಿಕಾರಿ ಡಾ.ಚಂದ್ರಶೇಖರ ಮೇಟಿ, ಎಸ್‌ಟಿಎಸ್ ಮಹಮ್ಮದ್ ಇಬ್ರಾಹಿಂ, ಲ್ಯಾಬ್ ಟೇಕ್ನಿಸಿಯನ್ ನಾಗರಾಜ, ಎಸ್‌ವಿವೈಎಂ ರಾಘವೇಂದ್ರ ಇತರರಿದ್ದರು.