ಸಿರಗುಪ್ಪ: ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಬೇಕು. ದುಶ್ಚಟಗಳಿಂದ ದೂರವಾದಾಗ ಮಾತ್ರ ಕುಟುಂಬ, ಸಮಾಜದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಕೊಪ್ಪಳ ಜನ ಜಾಗೃತಿ ವೇದಿಕೆ ಯೋಜನಾಧಿಕಾರಿ ವೈ.ನಾಗೇಶ್ ಹೇಳಿದರು.
ಇದನ್ನೂ ಓದಿ:
ನಗರದ ಹಳೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮತ್ತು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.
ಶಿಬಿರದ ಅಧಿಕಾರಿ ದೇವಿಪ್ರಸಾದ್ ಮಾತನಾಡಿ, ಒಟ್ಟು 52 ಶಿಬಿರಾರ್ಥಿಗಳ ಪೈಕಿ 8 ಜನ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು. 44 ಜನರು ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಬಸವಮಠ ಬಸವಭೂಷಣ ಸ್ವಾಮೀಜಿ, ಸಿರಗುಪ್ಪ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಜೈನ್, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಶಿವಶಂಕರರೆಡ್ಡಿ, ಶಿಬಿರಾಧಿಕಾರಿಗಳಾದ ಪ್ರಭು ಹಿರೇಮಠ, ಸಮಾಜ ಸೇವಕ ಧರಪ್ಪ ನಾಯಕ, ಶ್ರೀನಿವಾಸ ರಾವ್, ಬುಟ್ಟ ಶ್ರೀರಾಮುಲು ಇತರರಿದ್ದರು.