ಜಿಲ್ಲೆ

24ರಂದು ‘ಎವಿಡೆನ್ಸ್’ ಚಲನಚಿತ್ರ ಬಿಡುಗಡೆ

ರಾಜಣ್ಣ

ಚನ್ನರಾಯಪಟ್ಟಣ: ಸಿ.ಪಿ.ಪ್ರವೀಣ್ ಅವರ ಚೊಚ್ಚಲ ನಿರ್ದೇಶನದ ಕನ್ನಡ ಚಲನಚಿತ್ರ ‘ಎವಿಡೆನ್ಸ್’ ಮೇ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಿ.ಪಿ.ಪ್ರವೀಣ್ ತಿಳಿಸಿದರು.


ರಾಜ್ಯದ 40 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಬೆಂಗಳೂರಿನ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರ ಸೇರಿ ಮೈಸೂರು, ಹಾಸನ, ಚಿಕ್ಕಮಗಳೂರು, ರಾಮನಗರ, ನಮ್ಮೂರಿನ ಧನಲಕ್ಷ್ಮೀ ಚಿತ್ರಮಂದಿರದಲ್ಲಿ ಬಿಡುಗಡೆಗೊಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಇಂಟರಾಗೇಷನ್ ರೂಮ್‌ನಲ್ಲಿ ಸಾಕ್ಷಾಧಾರಗಳ ಸುತ್ತ ನಡೆಯುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಜತೆಗೊಂದು ಪ್ರೇಮಕಥೆ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ. ಚಿತ್ರವೂ ತುಂಬ ಚೆನ್ನಾಗಿ ಮೂಡಿ ಬಂದಿದ್ದು, ಜನ ಸಿನಿಮಾ ಮಂದಿರಕ್ಕೆ ಬಂದು ಚಿತ್ರ ನೋಡಿ ನಮ್ಮನ್ನು ಹರಸಿ, ಪ್ರೋತ್ಸಾಹಿಸಬೇಕು ಎಂದರು.


ಚಿತ್ರವೂ ಶ್ರೀದೃತಿ ಪ್ರೋಡಕ್ಷನ್ ಲಾಂಛನದಲ್ಲಿ ಶ್ರೀನಿವಾಸಪ್ರಭು, ಕೆ.ಮಾದೇಶ್, ಸಿ.ಎಸ್.ನಟರಾಜ್, ನಿರ್ಮಾಣ ಮಾಡಿದ್ದು, ಅರವಿಂದ್ ಅಚ್ಚು, ಎಂ.ಎನ್.ರವೀಂದ್ರರಾವ್, ಸಿ.ಪಿ.ಪ್ರಶಾಂತ್, ಕೆ.ರಮೇಶ್, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಸಹ ನಿರ್ಮಾಪಕರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಮಾಜಿ ಸದಸ್ಯ ರಘು ಶಾಮಿಯಾನ, ಚಿತ್ರದ ನಿರ್ಮಾಪಕರಾದ ಪ್ರದೀಪ್ ಅರವಿಂದ್‌ಕುಮಾರ್, ಕೆ.ರಮೇಶ್, ಕಲಾವಿದರಾದ ಆರಾಧ್ಯ ಶಿವಕುಮಾರ್, ಪ್ರವೀಣ್ ಸಹೋದರ ಮುರಳೀಧರ್ ಇದ್ದರು.