ಜಿಲ್ಲೆ

ಕನ್ನಡ ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ

ಕಮಲಾಪುರ: ಆಂಗ್ಲ ಭಾಷೆ ಹಾವಳಿಯಿಂದ ಕನ್ನಡಕ್ಕೆ ಹಿನ್ನಡೆ ಉಂಟಾಗುತ್ತಿದ್ದು, ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹಿರಿಯ ಸಾಹಿತಿ ಅಪ್ಪಾರಾವ ಅಕ್ಕೋಣಿ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ನನ್ನ ಹಿರಿಯ ಮಗ ಕುವೈತ್‌ನಲ್ಲಿ ವಾಸವಾಗಿದ್ದು, ಅಲ್ಲಿ ಸಾಕಷ್ಟು ಜನಕ್ಕೆ ಕನ್ನಡ ಹೇಳಿಕೊಡುತ್ತಿದ್ದಾನೆ. ನಮ್ಮ ಕುಟುಂಬ ಸದಾ ಕನ್ನಡಕ್ಕಾಗಿ ಮಿಡಿಯುತ್ತದೆ. ಕನ್ನಡದಿಂದಲೇ ಬೆಳೆದವರು ನಾವು, ಭಾಷೆ ಉಳಿಸಿ, ಬೆಳೆಸಲು ಪ್ರಯತ್ನಿಸುತ್ತೇವೆ ಎಂದರು. ಸುಭಾಷಚಂದ್ರ ಕಶೆಟ್ಟಿ ಮಾತನಾಡಿದರು.

ತಹಸೀಲ್ದಾರ್ ಮಹ್ಮದ್ ಮೌಸಿನ್, ಕಸಾಪ ತಾಲೂಕು ಅಧ್ಯP್ಷÀ ಸುರೇಶ ಲೇಂಗಟಿ, ಪಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಪ್ರಮುಖರಾದ ಸೈಯ್ಯದ್ ನಾಸೀರ್ ಅಹ್ಮದ್, ಅನೂಜ್‌ಕುಮಾರ, ಶಶಿಕಲಾ ಪಾಟೀಲ್, ಕಮಲಾಕರ, ಶರಣು ಜಾಲಳ್ಳಿ, ರಘುನಂದನ, ಮಂಜುನಾಥ, ರವೀಂದ್ರ ಬಿಕೆ ಇತರರಿದ್ದರು. ತಾಪಂ ಇಒ ಅಂಬರೀಶ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ಉಪ್ಪಿನ್ ಸ್ವಾಗತಿಸಿದರು. ಸವಿತಾ ಪ್ರಾರ್ಥಿಸಿದರು. ದೇವೇಂದ್ರ ಕಟ್ಟಿಮನಿ ನಿರೂಪಣೆ ಮಾಡಿದರು. ಅಶೋಕ ಗೌರೆ ವಂದಿಸಿದರು. ವಿವಿಧ ಕ್ಷೇತ್ರದ ಸಾಧಕರು ಹಾಗೂ ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.