ಮೈಸೂರು: ನರೇಂದ್ರ ಮೋದಿ ಮತ್ತೊಮ್ಮ ಪ್ರಧಾನಿಯಾಗಲು ಎಲ್ಲರೂ ಪಕ್ಷಬೇಧ ಮರೆತು ಸಹಕಾರ ನೀಡಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಮನವಿ ಮಾಡಿದರು.
ಕುವೆಂಪುನಗರದ 47ನೇ ವಾರ್ಡ್‌ನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಶನಿವಾರ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೂಡಿ ಮನೆ ಮನೆಗೆ ತೆರಳಿ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸುಭದ್ರ ದೇಶ-ಸುಭದ್ರ ಆಡಳಿತ ಬಿಜೆಪಿಯ ಮುಖ್ಯ ಧ್ಯೇಯ. ಇದು ಸಾಧ್ಯವಾಗಬೇಕಾದರೆ ಬಿಜೆಪಿ ಮತ್ತೊಮ್ಮ ಅಧಿಕಾರಕ್ಕೆ ಬರಬೇಕು. ದೇಶ ಮೊದಲು ಎನ್ನುವ ಪರಿಪಾಠ ಎಲ್ಲರ ಮನಸ್ಸಿನಲ್ಲೂ ನೆಲೆಯೂರಬೇಕು. ಆಗ ಮಾತ್ರ ಉತ್ತಮ ಆಡಳಿತ ನೋಡಲು ಸಾಧ್ಯ. ಇವೆಲ್ಲವೂ ಸಾಧ್ಯವಾಗಬೇಕಾದರೆ ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಅವರಿಗೆ ಅಧಿಕಾರ ನೀಡಬೇಕು ಎಂದ ಅವರು, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪೂರಕವಾದ ವಾತಾವರಣವಿದೆ. ಜನರು ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ಮತ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಮತಾದರರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸುವಂತಾಗಬೇಕು. ಶೇಕಡವಾರು ಮತದಾನ ಪ್ರಮಾಣ ಹೆಚ್ಚಾದಲ್ಲಿ ಹೆಚ್ಚು ಮತ ಪಡೆಯಲು ಸಾಧ್ಯಗಾವಲಿದೆ ಎಂದು ಹೇಳಿದರು.
ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಪೇಂದ್ರ, ಮುಖಂಡರಾದ ಕುಮಾರ್, ಕೇಬಲ್ ಸೋಮು, ಶಾಂತವೀರಪ್ಪ, ಅನ್ನಪೂರ್ಣ ಇತರರಿದ್ದರು.