ಪಡುಬಿದ್ರಿ: ಸರ್ವರೂ ಕೈ ಜೋಡಿಸಿ ಶಿಕ್ಷಣ ರಂಗದಲ್ಲಿ ಮುಂದುವರಿದಾಗ ಶಾಲೆ ಸಾಧನೆ ಮಾಡಬಹುದೆನ್ನುವುದನ್ನು ಪುಷ್ಟಿ ಪ್ರಶಸ್ತಿ ಮುಡಿಗೇರಿಸಿ ನಂದಿಕೂರು ಶಾಲೆ ಸಾಬೀತುಗೊಳಿಸಿದೆ. ಶಾಲಾ ಕ್ರಿಯಾಶೀಲತೆ, ಪ್ರತಿಯೊಂದು ಚಟುವಟಿಕೆಯಲ್ಲೂ ಶಾಲೆ ಮುಂಚೂಣಿಯಲ್ಲಿದೆ ಎಂದು ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಹೇಳಿದರು.
ಸಮಗ್ರ ಶಿಕ್ಷಣ ಕರ್ನಾಟಕದಡಿ ನೀಡಲಾಗುವ ಸರ್ಕಾರಿ ಶಾಲೆಗಳ ಪುಷ್ಟಿ ಯೋಜನೆಯಡಿ ರಾಜ್ಯಮಟ್ಟದ ದಿ ಬೆಸ್ಟ್ ಎಸ್‌ಡಿಎಂಸಿ ಸ್ಕೂಲ್ ಪ್ರಶಸ್ತಿ ಪಡೆದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಪ್ರಕಾಶ್ ರಾವ್ ಮಾತನಾಡಿದರು. ಮುಖ್ಯ ಶಿಕ್ಷಕಿ ರಮಣಿ, ಎಸ್‌ಡಿಎಂಸಿ ಹಾಗೂ ಕ್ರಿಯಾ ಸಮಿತಿ ಎಲ್ಲರನ್ನು ಅಭಿನಂದಿಸಲಾಯಿತು. ಪಲಿಮಾರು ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ನಂದಿಕೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ಕಾರ್ಯಾಧ್ಯಕ್ಷ ಲಕ್ಷ್ಮಣ ಎಲ್ ಶೆಟ್ಟಿವಾಲ್, ಕಾರ್ಯದರ್ಶಿ ಸಿಎ ಅನಿಲ್ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ನಾಗರಾಜ್ ಭಟ್, ಆಡಳಿತಾಧಿಕಾರಿ ಎಂ.ಸಾಯಿನಾಥ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಜನಾರ್ದನ ರಾವ್, ಸುಜಯಾ ಶೆಟ್ಟಿ, ವಸಂತ ಶೆಟ್ಟಿ, ಸೋಮನಾಥ ರೈ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೇಮಾ ಸ್ವಾಗತಿಸಿದರು.