ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು ಉದ್ಘಾಟಿಸಿದರು.ಶಿವಲಿಂಗ ಪಂಡಿತಾರಾದ್ಯ ಶಿವಾಚಾರ್ಯರು, ಮಲ್ಲಯ್ಯ ಸ್ವಾಮಿಗಳು, ಬಸವರಾಜ ಹಿರೇಮಠ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ರುದ್ರಾಕ್ಷಿ ಧರಿಸಿ

Vijayapura - Desk - Gurappa Lokuri

ಜಮಖಂಡಿ: ಪ್ರತಿಯೊಬ್ಬರೂ ಲಿಂಗಧಾರಿಗಳಾಗಬೇಕು. ವಿಭೂತಿ, ರುದ್ರಾಕ್ಷಿ ಧರಿಸಬೇಕೆಂದು ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು ಹೇಳಿದರು.

ತಾಲೂಕಿನ ಮಧುರಖಂಡಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಾಸೀಯ ಸಂಗೀತದ ಗುರು ಲಿ. ಪಂಡಿತ ಸ್ವಾಮಿ ಸಂಗಮೇಶ್ವರ ಹಿರೇಮಠ ಅವರ 11ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಶಾಸೀಯ ಸಂಗೀತೊತ್ಸವ, ಧರ್ಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಧಾರಣೆಯಿಂದ 33 ಕೋಟಿ ದೇವತೆಗಳ ಪೂಜೆ ಮಾಡಿದಂತೆ, ಒಂದು ಋದ್ರಾಕ್ಷಿಧಾರಣೆಯಿಂದ ಕೋಟಿ ಆಕಳುಗಳ ದಾನಮಾಡಿದಂತೆ, ಗೋಮಯದಿಂದ ತಯಾರಿಸಿದ ವಿಭೂತಿ ಧರಿಸುವುದರಿಂದ ಶರೀರದಲ್ಲಿನ ಹಲವಾರು ರೋಗಗಳು ನಿವಾರಣೆಯಾಗುತ್ತವೆ ಎಂದರು.

ಭಂಗಾರದಂತ ಬದುಕು ನಮ್ಮದಾಗಿರಲು ಒಳ್ಳೆಯ ಸಂಸ್ಕಾರ ಪಡೆಯಬೇಕು. ನೀರು, ಅನ್ನ, ಒಳ್ಳೆಯ ನುಡಿ ಇವು ಮೂರು ರತ್ನಗಳು, ಇವುಗಳನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಭಾವವಿರಬೇಕು ಎಂದರು.

ಜಮಖಂಡಿ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾದ್ಯ ಶಿವಾಚಾರ್ಯರು ಮಾತನಾಡಿ, ನಂಬಿದವರಿಗೆ ಕಲ್ಲೂ ದೇವರು, ನಂಬದವರಿಗೆ ದೇವರೇ ಕಲ್ಲು ಎಂದರು.

ಎಸ್. ಎಂ. ಅಣ್ಣಿಗೇರಿ, ರಾಚಯ್ಯ ಹಿರೇಮಠ, ಶ್ರೀಶೈಲ ಮಂಟೂರ, ವಿರೂಪಾಕ್ಷಯ್ಯ ವಸ್ತ್ರದ, ಬಸಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು.

ಮಲ್ಲಯ್ಯ ಸ್ವಾಮಿಗಳು, ಬಸವರಾಜ ಹಿರೇಮಠ ಇದ್ದರು.

ಹಿರೇಮಠದ ವಟುಗಳು ವೇದಘೋಷ ಹೇಳಿದರು. ಜಗನ್ನಾಥ ದೇಸಾಯಿ, ಬಸಲಿಂಗಯ್ಯ ಮಠಪತಿ, ಮಹಾಲಿಂಗಯ್ಯ, ಪ್ರಶಾಂತ ಮಠಪತಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ರಾಘವೇಂದ್ರ ಕಟ್ಟಿ ಪ್ರಾರ್ಥಿಸಿದರು. ಗಿರಮಲ್ಲಯ್ಯ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಸಿದರೆಡ್ಡಿ ನಿರೂಪಿಸಿದರು. ಪ್ರಭು ಹಿಡಕಲ್ ವಂದಿಸಿದರು.