filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: SFHDR; cct_value: 0; AI_Scene: (200, -1); aec_lux: 189.84175; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಪ್ರತಿಯೊಬ್ಬರೂ ಗುರುಗಳಿಗೆ ಗೌರವ ಸಲ್ಲಿಸಬೇಕು

ಕುಶಾಲನಗರ: ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು, ಪ್ರತಿಯೊಬ್ಬರೂ ಗುರುಗಳಿಗೆ ಗೌರವ ಸಲ್ಲಿಸಬೇಕು ಎಂದು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತ ಶಯನ ಹೇಳಿದರು.

ಸಮೀಪದ ಗುಮ್ಮನಕೊಲ್ಲಿ ಮೂಕಾಂಬಿಕಾ ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಎಸ್.ಎಸ್.ಗೋಪಾಲ ಅವರಿಗೆ ಸೋಮವಾರ ಆಯೋಜಿಸಿದ್ದ ಗೌರವ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು, ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು. ಗೋಪಾಲ್ ಅವರು ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಅಡಿಪಾಯವೇ ಶಿಕ್ಷಕರಾಗಿದ್ದಾರೆ. ಅವರು ಇಂದು ವಯೋನಿವೃತ್ತಿಯಾಗಿದ್ದು, ವೃತ್ತಿಯಲ್ಲಿ ಕೊನೆ ಇರಬಹುದು. ಆದರೆ, ಪ್ರವೃತ್ತಿಯಲ್ಲಿ ಅಲ್ಲ ಎಂದರು.

ಇವರು ಪ್ರತಿಯೊಬ್ಬರು ಪ್ರೀತಿ, ಗೌರವದಿಂದ ಕಾಣುವ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದಾರೆ. ಇಂತಹ ಗುಣವನ್ನು ಎಲ್ಲರೂ ಹೃದಯದಲ್ಲಿ ತುಂಬಿಕೊಲಕ್ಳಬೇಕು ಎಲ್ಲರಲ್ಲೂ ಇರಬೇಕು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಗೋಪಾಲ್ ಅವರು ಸುದೀರ್ಘವಾದ ಸೇವೆ ಸಲ್ಲಿಸುವ ಮೂಲಕ ಇಲ್ಲಿನ ವಾತಾವರಣದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ. ಅವರ ಬುದುಕಿನ ಅರ್ಧದಷ್ಡು ವಯಸ್ಸನ್ನು ಶಾಲೆಯಲ್ಲಿ ಕಳೆದಿದ್ದಾರೆ. ವೃತ್ತಿ ಬಗ್ಗೆ ಗೌರವ ಪ್ರೀತಿ ಇಟ್ಟುಕೊಂಡು.ಧನ್ಯತೆ ಭಾವನೆ ಮೂಡಿಸಿದೆ. ಆರೋಗ್ಯಪೂರ್ಣ ಸಮಾಜ ಕಟ್ಟಲು ಇಂತಹ ವ್ಯಕ್ತಿಗಳು ತುಂಬ ಅವಶ್ಯಕವಾಗಿದ್ದು, ಸಮಾಜ ಗೌರವಿಸಬೇಕು ಎಂದರು.

ಮಕ್ಕಳು ತಂದೆ ತಾಯಿಗಳನ್ನು ಹಗುರವಾಗಿ ಕಾಣಬಾರದು. ಗೌರವ ಪ್ರೀತಿಯಿಂದ ಕಾಣಬೇಕು ಎಂದು ಗೋಪಾಲ್ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ವಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕೂಡಿಗೆ ಡಯಟ್ ಉಪನ್ಯಾಸಕಿ ಬಿ.ಎನ್.ಪುಷ್ಪಾ, ಮೂಕಾಂಬಿಕಾ ಶಸಲೆ ಮುಖ್ಯ ಶಿಕ್ಷಕ ಎಸ್.ಎಸ್.ಗೋಪಾಲ್, ಶಿಕ್ಷಕಿ ದೇವಕಿಗೋಪಾಲ್, ಮೂಕಾಂಬಿಕಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಸನ್ನ ನಿವೃತ್ತ ಸಿಬ್ಬಂದಿ ಪಾರ್ವತಿ, ಪ್ರಭಾರ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಪ್ರತಾಪ್ ಉಪಸ್ಥಿತರಿದ್ದರು.

ಎಸ್.ಎಸ್.ಗೋಪಾಲ್ ಅವರಿಗೆ ಅಭಿನಂದನೆ: ಮೂಕಾಂಬಿಕಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೂದನ ಸುಬ್ಬಯ್ಯ ಗೋಪಾಲ್ ಅವರಿಗೆ ಶಾಲಾ ಆಡಳಿತ ಮಂಡಳಿ ಪರವಾಗಿ ಕೆ.ಪಿ.ಚಂದ್ರಕಲಾ ಅವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ನಂತರ ಜಿಲ್ಲಾ ಜಾನಪದ ಪರಿಷತ್ತು, ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘ, ಹಳೆಯ ವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಗೋಪಾಲ್ ಅವರನ್ನು ಸನ್ಮಾನಿಸಿ ಗೌರವಿಸಿದರು.