ಜಿಲ್ಲೆ

ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು

ಅವಿನಾಶ್ ಜೈನಹಳ್ಳಿ

ಮೈಸೂರು: ಸಂವಿಧಾನದಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಡಾ.ಆರ್.ಜಿ.ಚಿದಾನಂದ ತಿಳಿಸಿದರು.

ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಮಹಾರಾಜ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಪರಿಹಾರದ ಹಕ್ಕಗಳು ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅತ್ಯಂತ ಬೃಹತ್ ಹಾಗೂ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಇಂತಹ ಸಂವಿಧಾನದ ಶಕ್ತಿಯನ್ನು ನಾವು ಬಳಸಿಕೊಂಡರೆ ಎಂತಹ ಹೋರಾಟ ಬೇಕಾದರು ಮಾಡಬಹುದು ಎಂದರು.

ಕುಡಿಯುವ ನೀರಿನ ಬಾಟಲ್, ಆಹಾರ ಧಾನ್ಯಗಳೆಲ್ಲ ಬಂಡವಾಳಶಾಹಿಗಳ ಕೈ ಸೇರಿವೆ. ಆದರೆ ಅವು ನಮ್ಮ ಹಕ್ಕುಗಳನ್ನು ಕಿತ್ತಕೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಬಗ್ಗೆ ನಾವು ಆಳವಾಗಿ ತಿಳಿಯಬೇಕು ಎಂದು ತಿಳಿಸಿದರು.

ಕೇಂದ್ರದ ನಿರ್ದೇಶಕ ಜೆ.ಸೋಮಶೇಖರ್, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಸೋಮಶೇಖರಪ್ಪ, ಡಾ.ನರೇಂದ್ರಕುಮಾರ್ ಇತರರಿದ್ದರು.