ಪಾಲಿಸಿ 
ಜಿಲ್ಲೆ

ಪ್ರತಿಯೊಬ್ಬರೂ ಸಂವಿಧಾನದ ಮೂಲ ಹಕ್ಕು, ಕರ್ತವ್ಯ ಪಾಲಿಸಿ

ವಿಜಯಪುರ: ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯ ಪಾಲಿಸುವುದರಿಂದ ದೇಶದಲ್ಲಿ ಶಾಂತಿ ನೆಲಸಲಿದೆ ಎಂದು ಉಪನ್ಯಾಸಕಿ ವಿದ್ಯಾ ಕಲ್ಯಾಣಶೆಟ್ಟಿ ಹೇಳಿದರು.

ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಟಕದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಬದುಕು ಮತ್ತು ಸಾಧನೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಂವಿಧಾನವು ದೇಶದ ಏಳಿಗೆಗಾಗಿ ಸಮಾಜದಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ, ಅಭಿವ್ಯಕ್ತಿ ಮತ್ತು ಗೌರವಯುತವಾಗಿ ಜೀವನ ನಡೆಸಲು ಅವಕಾಶ ಒದಗಿಸಿಕೊಟ್ಟಿದೆ. ಅದರ ಆಶಯದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ವವ್ಯ. ನಮ್ಮ ಸಂಸತಿ, ಧರ್ಮ ಇತಿಹಾಸವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಅಂಬೇಡ್ಕರ್​ ಅವರು ಸರ್ವರ ಕಲ್ಯಾಣಕ್ಕಾಗಿ ಶಕ್ತಿ ತುಂಬಲು ಮತ್ತು ಬದುಕನ್ನು ಕಟ್ಟಿಕೊಡಬೇಕೆಂಬ ಉದ್ದೇಶದಿಂದ ಹಿಂದು ಧರ್ಮದ ಬಗ್ಗೆ ಅಭಿಮಾನವಿಟ್ಟು ಬೌದ್ಧ ಧರ್ಮ ಸ್ವೀಕರಿಸಿದರು. ಹೀಗಾಗಿ ಸಂವಿಧಾನ ಶಿಲ್ಪಿ ಎಂದು ಕರೆಯಲ್ಪಟ್ಟರು ಎಂದರು.

ಮುಖ್ಯಅತಿಥಿ ಅಪ್ಪಾಸಾಹೇಬ ಕೋರಿ ಮಾತನಾಡಿದರು. ಸಹದೇವ ನಾಡಗೌಡರ, ಎಂ.ಜಿ. ಯಾದವಾಡ, ಮಲ್ಲಿಕಾರ್ಜುನ ಅಮರಣ್ಣವರ, ಡಾ. ಸಂಗಮೇಶ ಮೇತ್ರಿ, ದೊಡ್ಡಣ್ಣ ಭಜಂತ್ರಿ, ಡಾ.ವಿ.ಡಿ. ಐಹೊಳ್ಳಿ, ಶಾರದಾ ಐಹೊಳ್ಳಿ, ಡಾ.ಎಂ.ಎಸ್​. ಮಾಗಣಗೇರಿ, ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ, ತ್ರಿವೇಣಿ ಬುರ್ಲಿ ಮತ್ತಿತರರಿದ್ದರು.

ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಂಗಮೇಶ ಬದಾಮಿ ನಿರೂಪಿಸಿದರು. ವಿಠ್ಠಲ ತೇಲಿ ವಂದಿಸಿದರು.