ಗಂಗಾವತಿ ತಾಲೂಕಿನ ಬಂಡಿ ಬಸಪ್ಪ ಕ್ಯಾಂಪ್‌ನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸಂಗಾಪುರ ಕಾರ್ಯಕ್ಷೇತ್ರದ ವರಮಹಾಲಕ್ಷ್ಮಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಮತ್ತು ಅರಿವು ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಜೀವಾನಂದ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಹಾಗೂ ನಗರಸಭೆ ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ, ಸಮನ್ವಯಾಧಿಕಾರಿ ಸುಧಾ ಇತರರಿದ್ದರು. 
ಜಿಲ್ಲೆ

ಎಲ್ಲರೂ ಮಹಿಳಾ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಗಂಗಾವತಿ: ಪ್ರತಿಯೊಬ್ಬರು ಮಹಿಳಾ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಕಾನೂನಿನ ಅರಿವು ಮುಖ್ಯ ಎಂದು ನಗರಸಭೆ ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ ಹೇಳಿದರು.

ತಾಲೂಕಿನ ಬಂಡಿ ಬಸಪ್ಪ ಕ್ಯಾಂಪ್‌ನ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸಂಗಾಪುರ ಕಾರ್ಯಕ್ಷೇತ್ರದ ವರಮಹಾಲಕ್ಷ್ಮಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾವಲಂಭನೆಯಿಂದ ಕುಟುಂಬವನ್ನು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವಂತೆ ಸಲಹೆ ನೀಡಿದರು. ಜ್ಞಾನ ವಿಕಾಸ ಕೇಂದ್ರದ ಅಗತ್ಯತೆ, ಚಟುವಟಿಕೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಸಮನ್ವಯಾಧಿಕಾರಿ ಸುಧಾ ಮಾಹಿತಿ ನೀಡಿದರು. ಕೇಂದ್ರದಿಂದ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗ್ರಾಪಂ ಸದಸ್ಯ ಜೀವಾನಂದ, ವಲಯ ಮೇಲ್ವಿಚಾರಕ ನೀಲರಾಜ್, ಕೇಂದ್ರದ ಅಧ್ಯಕ್ಷೆ ಲತಾ, ಸೇವಾ ಪ್ರತಿನಿಧಿ ನೀಲಾ ಇತರರಿದ್ದರು.